ಜಿಲ್ಲೆ

ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ನೀರು ಹರಿವು ಹೆಚ್ಚಳ

ವಿವೇಕಾನಂದ ದಾಸನಕೊಪ್ಪ

ರಟ್ಟಿಹಳ್ಳಿ: ಪಟ್ಟಣದಲ್ಲಿ ಇರುವ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಶನಿವಾರ ಹೆಚ್ಚು ನೀರು ಹರಿಯುತ್ತಿದ್ದು, ಈ ಭಾಗದ ರೈತಲ್ಲಿ ಸಂತಸ ಮೂಡಿದೆ.

ಕಳೆದ ವಾರದಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದೆ. ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ನೀರು ಹರಿಯುತ್ತಿರುವುದರಿಂದ ಜಮೀನುಗಳಿಗೆ ನೀರು ಹಾಯಿಸುಕೊಳ್ಳಲು ಅನುಕೂಲವಾಗಲಿದೆ. ಪ್ರತಿ ವರ್ಷ ಜೂನ್‌ನಲ್ಲಿ ಕಾಲುವೆಗಳಲ್ಲಿ ನೀರು ತುಂಬಿ ಹರಿಯುತ್ತಿತ್ತು, ಈ ಭಾರಿ ಮುಂಗಾರು ಕೊರತೆಯಾದ ಪರಿಣಾಮ ಜುಲೈ ಕೊನೆಯಲ್ಲಿ ಕಾಲುವೆಗೆ ನೀರು ಹರಿದಿದೆ.