ಆನಂದಪುರ: ಇತ್ತೀಚಿನ ವರ್ಷಗಳಲ್ಲಿ ರೈತರ ಪರಿಶ್ರಮ ವ್ಯರ್ಥವಾಗುತ್ತಿದೆ. ವಿವಿಧ ರೋಗಗಳು, ಕೀಟಗಳಿಂದ ಬೆಳೆ ಸಂರಕ್ಷಿಸುವುದು ರೈತರಿಗೆ ದೊಡ್ಡ ಸವಾಲಾಗಿದೆ ಎಂದು ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್ ತಿಳಿಸಿದರು.
ವಿವಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕೂರಿಗೆ ಭತ್ತ ಬಿತ್ತನೆ ಮತ್ತು ಪೇರಲೆ ಕೃಷಿ ನಿರ್ವಹಣೆ ಕುರಿತ ರೈತರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿವಿ ವಿಜ್ಞಾನಿಗಳು ಮತ್ತು ಅಧ್ಯಯನ ನಿರತ ವಿದ್ಯಾರ್ಥಿಗಳು ಈ ವಿಷಯಗಳಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ರೈತರು ವಿವಿಯೊಂದಿಗೆ ಸತತ ಸಂಪರ್ಕ ಬೆಳೆಸಿ ತಮ್ಮ ಕೃಷಿಯಲ್ಲಿನ ವಿವಿಧ ರೋಗಗಳ ಬಾಧೆ ಸಮಸ್ಯೆ ಬಗ್ಗೆ ಪರಿಹಾರ ಪಡೆದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಸಮಗ್ರ ಪೀಡೆ ನಿರ್ವಹಣೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಮುಖೇಶ ಸೇಹಗಲ್ ಮಾತನಾಡಿ, ವಾತಾವರಣ ಮತ್ತು ವಾಯುಗಣದ ಏರು-ಪೇರುಗಳು ಕೃಷಿ ಕ್ಷೇತ್ರದಲ್ಲಿ ಅತ್ಯಽಕ ಪ್ರಭಾವ ಬೀರುತ್ತಿದೆ. ಇಂದಿನ ವಾತಾವರಣದಲ್ಲಿ ಸಸ್ಯಗಳಲ್ಲಿ ಜಂತು ರೋಗ ಅಽಕಗೊಂಡಿದ್ದು ಸಮರ್ಪಕ ನಿರ್ವಹಣೆ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿ ಶಿಕ್ಷಣ ನಿರ್ದೇಶಕ ಡಾ.ದುಷ್ಯಂತ ಕುಮಾರ್, ಸಂಶೋಧನಾ ನಿರ್ದೇಶಕ ಡಾ.ಕೆ.ಟಿ.ಗುರುಮೂರ್ತಿ, ವಿಸ್ತರಣಾ ನಿರ್ದೇಶಕ ಡಾ.ಕೆ.ಸಿ.ಗುರುಮೂರ್ತಿ, ಕುಲಸಚಿವ ಡಾ.ಗಣೇಶ ನಾಯ್ಕ, ಕೃಷಿ ಕಾಲೇಜಿನ ಡೀನ್ ಡಾ.ಎಚ್.ರವೀಂದ್ರ, ನಿವೃತ್ತ ಪ್ರಾಧ್ಯಾಪಕ ಡಾ. ಈ.ಎನ್.ಹೂಸಗೌಡರ್, ಸಹಾಯಕ ಪ್ರಾಧ್ಯಾಪಕ ಡಾ.ನರಸಿಂಹ ಮೂರ್ತಿ ಇತರರಿದ್ದರು. ಕಾರ್ಯಾಗಾರದಲ್ಲಿ ಪಾಲ್ಗೊಂಡ ರೈತರಿಗೆ ಜೈವಿಕ ಶಿಲೀಂದ್ರ ನಾಶಕ, ಬೇವಿನ ಎಣ್ಣೆ ಹಾಗೂ ಉಪಯುಕ್ತ ಕೀಟ ನಾಶಕಗಳನ್ನು ವಿತರಿಸಲಾಯಿತು.