ರಾಯಚೂರು ವಿವಿಯ ಕೃಷ್ಣಾತುಂಗಾ ಸಭಾಂಗಣದಲ್ಲಿ ಜಿಎಸ್‌ಟಿ ಕುರಿತು ಸೋಮವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ನಿರ್ದೇಶಕಿ ಶಿವಲಿಂಗಮ್ಮ ಪಾಟೀಲ್ ಉದ್ಘಾಟಿಸಿದರು. ವಿವಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಸಿ.ಎಸ್.ಪಾರ್ವತಿ, ವಿದ್ಯಾರ್ಥಿ ಕಲ್ಯಾಣಾಕಾರಿ ಡಾ.ಜಿ.ಎಸ್.ಬಿರಾದರ್, ಪ್ರಾಧ್ಯಾಪಕರಾದ ಡಾ.ಗೀತಾ ಗೋಪಾಲಕೃಷ್ಣ, ಎಂ.ರೂಪಾ, ಡಾ.ಟಿ.ಮಾರೆಪ್ಪ, ಡಾ.ಶಾಂತಕುಮಾರ ಇದ್ದರು. 
ಜಿಲ್ಲೆ

ಜಿಎಸ್‌ಟಿಯಿಂದ ಆನ್‌ಲೈನ್ ವಹಿವಾಟಿನಲ್ಲಿ ಏರಿಕೆ

ರಾಚಯ್ಯ ಸ್ವಾಮಿ

ರಾಯಚೂರು: ಜಿಎಸ್‌ಟಿ ಜಾರಿಯಿಂದಾಗಿ ಭಾರತದ ಆನ್‌ಲೈನ್ ವಹಿವಾಟಿನಲ್ಲಿ ಗಮನಾರ್ಹ ಏರಿಕೆಯಾಗಿದ್ದು, ಸರಳ ಹಾಗೂ ಸ್ಪಷ್ಟ ತೆರಿಗೆ ರೂಪದ ಕಾರಣ ವ್ಯಾಪಾರ ಘಟಕಗಳಿಗೆ ಮಾನಸಿಕ ಉತ್ತೇಜನ ಕೂಡಾ ಸಿಕ್ಕಂತಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ನಿರ್ದೇಶಕಿ ಶಿವಲಿಂಗಮ್ಮ ಪಾಟೀಲ್ ಹೇಳಿದರು.
ಸ್ಥಳೀಯ ರಾಯಚೂರು ವಿಶ್ವವಿದ್ಯಾಲಯದ ಕೃಷ್ಣಾತುಂಗಾ ಸಭಾಂಗಣದಲ್ಲಿ ವಾಣಿಜ್ಯಶಾಸ ಅಧ್ಯಯನ ವಿಭಾಗದಿಂದ ಜಿಎಸ್‌ಟಿ ಒಂದು ನೋಟ ಮತ್ತು ಸರಕು ಸೇವಾ ತೆರಿಗೆ ಕುರಿತು ಸೋಮವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಯಾದಾಗ ಜನರಲ್ಲಿ ಅನೇಕ ಗೊಂದಲಗಳಿದ್ದವು. ಸರ್ಕಾರಕ್ಕೂ ಹೆಚ್ಚಿನ ತೆರಿಗೆ ಸಂಗ್ರಹದ ಬಗ್ಗೆ ಅನುಮಾನಗಳಿದ್ದವು. ಆದರೆ ಈಗ ಜನರಿಗೆ ಸ್ಪಷ್ಟತೆ ಸಿಕ್ಕಿದ್ದು ಒಂದು ದೇಶ, ಒಂದು ತೆರಿಗೆಯ ಮಹತ್ವ ಏನೂ ಎಂಬುದು ಅರಿವಾಗುತ್ತಿದೆ.
ತೆರಿಗೆ ವ್ಯವಸ್ಥೆ ದೇಶದ ಆರ್ಥಿಕತೆಯ ಪ್ರಬಲ ಆಧಾರಸ್ತಂಭವಾಗಿದೆ. ಸರಳ ಹಾಗೂ ನಾಗರಿಕ ಸ್ನೇಹಿ ತೆರಿಗೆ ವ್ಯವಸ್ಥೆಯನ್ನು ಹೊಂದಿರಬೇಕಿರುವುದು ಪ್ರತಿಯೊಂದು ಆರ್ಥಿಕತೆಯ ಪ್ರಮುಖ ಬೇಡಿಕೆಯಾಗಿದೆ. ಸರಕು ಮತ್ತು ಸೇವಾ ತೆರಿಗೆ ದೇಶದ ಅತ್ಯಂತ ಕ್ರಾಂತಿಕಾರಿ ತೆರಿಗೆ ಸುಧಾರಣೆಗಳಲ್ಲಿ ಒಂದಾಗಿದೆ.
ಕೇಂದ್ರ ಮತ್ತು ರಾಜ್ಯದಿಂದ ಸಂಗ್ರಹಿಸಲಾಗುತ್ತಿದ್ದ ಹಲವಾರು ಪರೋಕ್ಷ ತೆರಿಗೆಗಳನ್ನು ಒಗ್ಗೂಡಿಸಿ ರಾಷ್ಟ್ರವ್ಯಾಪಿ ಏಕರೂಪತೆಯ ತೆರಿಗೆ ಅನುಷ್ಠಾನಗೊಳಿಸಲಾಗಿದೆ. ವ್ಯಾಟ್, ಸೇವಾ ತೆರಿಗೆ ಮತ್ತು ಅಬಕಾರಿಯಂತಹ ಅನೇಕ ಪರೋಕ್ಷ ತೆರಿಗೆ ತೆಗೆದು ಹಾಕಲಾಗಿದೆ ಎಂದು ಶಿವಲಿಂಗಮ್ಮ ಪಾಟೀಲ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಸಿ.ಎಸ್.ಪಾರ್ವತಿ ಮಾತನಾಡಿ, ಸಾಸಬೇಕೆಂಬ ಛಲದ ಜತೆಗೆ ಪರಿಶ್ರಮದ ಗುಣ ಇದ್ದರೆ ಏನನ್ನಾದರೂ ಸಾಸಬಹುದು ಎನ್ನುವದಕ್ಕೆ ರಾಯಚೂರು ನೆಲದ ಪ್ರತಿಭೆಯಾಗಿರುವ ಕೆಎಎಸ್ ಅಕಾರಿ ಶಿವಲಿಂಗಮ್ಮ ಪಾಟೀಲ್ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿ ವಿದ್ಯಾರ್ಥಿ ಕಲ್ಯಾಣಾಕಾರಿ ಡಾ.ಜಿ.ಎಸ್.ಬಿರಾದರ್, ಪ್ರಾಧ್ಯಾಪಕರಾದ ಡಾ.ಗೀತಾ ಗೋಪಾಲಕೃಷ್ಣ, ಎಂ.ರೂಪಾ, ಡಾ.ಟಿ.ಮಾರೆಪ್ಪ, ಡಾ.ಶಾಂತಕುಮಾರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.