ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಹಾಗೂ ವೀಕೆಂಡ್ ಹಿನ್ನೆಲೆಯಲ್ಲಿ ಪ್ರಮುಖ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣವೂ ಆದ ಉಡುಪಿ ಜಿಲ್ಲೆಯಲ್ಲಿ ಯಾತ್ರಿಕರು, ಪ್ರವಾಸಿಗರ ಭರಪೂರ ಪ್ರವಾಹ ಕಂಡುಬರುತ್ತಿದೆ.
ಉಡುಪಿ ಶ್ರೀಕೃಷ್ಣ ಮಠಕ್ಕೆ ಯಾವಾಗಲೂ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಇದೀಗ ಬೇಸಿಗೆ ರಜೆ ಇರುವುದರಿಂದ ಭಕ್ತರ ಸಂಖ್ಯೆ ಐದಾರು ಪಟ್ಟು ಹೆಚ್ಚಿದೆ. ಕಾಶ್ಮೀರ ಟನೆ ಬಳಿಕ ಇಲ್ಲಿಯೂ ಹೆಚ್ಚಿನ ಭದ್ರತೆ ಒದಗಿಸುವ ಅನಿವಾರ್ಯತೆ ಇದೆ. ಭದ್ರತೆ ಹೆಚ್ಚಿಸಿದರೆ ಅಪಾರ ಭಕ್ತ ಸಮೂಹಕ್ಕೆ ತೊಂದರೆ, ಕಿರಿಕಿರಿ ಆಗಬಹುದು. ಹೀಗಾಗಿ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಹೇಗೆ ಭದ್ರತೆ ಒದಗಿಸಬೇಕೆಂಬ ಕುರಿತು ಚರ್ಚಿಸಿ ಶೀಘ್ರವೇ ಯೋಜಿಸಲಾಗುವುದು. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ