ರಬಕವಿ/ಬನಹಟ್ಟಿ: ದೇಶದ ಬೆಳವಣಿಗೆಗೆ ಕಾರಣವಾಗಿರುವ ಹಳ್ಳಿಗಳಲ್ಲಿ ಎನ್‌ಎಸ್‌ಎಸ್ ಶಿಬಿರಗಳು ಹೆಚ್ಚು ಆಯೋಜಿಸಬೇಕು ಎಂದು ಬನಹಟ್ಟಿ ಹಿರೇಮಠದ ಶ್ರೀಶರಣಬಸವ ಶಿವಾಚಾರ್ಯರು ಹೇಳಿದರು.
ತಾಲೂಕಿನ ನಾವಲಗಿ ಕೆಪಿಎಸ್ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಘಟಕದಿಂದ ಯಲ್ಲಟ್ಟಿ ಗ್ರಾಮದ ಶ್ರೀಕಾಡಸಿದ್ದೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜೋತಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವದರಿಂದ ಜ್ಞಾನ ವೃದ್ಧಿಯಾಗುತ್ತದೆ, ಜೀವನದಲ್ಲಿ ಯಶಸ್ವಿ ಹೊಂದಬೇಕಾದರೆ ಇಂತಹ ಶಿಬಿರಗಳಲ್ಲಿ ಭಾಗವಹಿಸಿ ದೇಶ ಪ್ರೇಮ, ಶಿಸ್ತು, ಸಮಯ ಪ್ರಜ್ಞೆಯ ಅರಿವು ಮೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಶರತ್ ಜಂಬಗಿ ಮಾತನಾಡಿ, ಶಿಬಿರಾರ್ಥಿಗಳು ಶಿಬಿರದಲ್ಲಿ ಶ್ರೆದ್ದೆಯಿಂದ ಪಾಲ್ಗೊಂಡು ಸದುಪಯೋಗ ಪಡೆದುಕೋಳ್ಳಬೇಕೆಂದರು.
ನೌಕರರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಹನಗಂಡಿ, ಶಿಬಿರಾಧಿಕಾರಿ ಎಂ.ಸಿ. ನರೇಗಲ್ಲ, ಗ್ರಾಪಂ ಅಧ್ಯಕ್ಷ ಸದಾಶಿವ ಸವದಿ, ಮಹಾದೇವ ರೆಡ್ಡಿ, ಎಸ್ಡಿಎಂಸಿ ಉಪಾಧ್ಯಕ್ಷ ಬಸವರಾಜ ಗಣಿ ಗಂಗಪ್ಪ ಅಮ್ಮಲಜೇರಿ, ಹಣಮಂತ ನಾವಿ, ಆನಂದ ಕಂಪು, ಸಿದ್ದು ಲೆಂಡಿ, ಅಲ್ಲಪ್ಪ ಮುಗಳಖೋಡ, ಶ್ರಿಶೈಲ ಸಂತಿ, ಕಾಡೇಶ ಕಂಪು, ಬಿ.ಬಿ.ಕುಂಬಾರ, ಐ.ಪಿ.ಬಾವಲತ್ತಿ, ಜಿ.ಎಸ್.ಮಾಳಗೆ, ಎಲ್.ಎಲ್.ಶಿಲ್ಲೇದಾರ, ಬಿ ಜಿ.ಮೆಟಗುಡ್ಡ, ಪ್ರಿಯಾಂಕಾ ಬಂಡಿಗಣಿ, ರೋಹಿಣಿ ಪತ್ತಾರ ಪಾಲ್ಗೊಂಡಿದ್ದರು.