ಜಿಲ್ಲೆ

ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಳ

Mysuru

ಮೈಸೂರು: ಕೋವಿಡ್ ನಂತರ ಮೊಬೈಲ್ ಗೀಳು ಹೆಚ್ಚಾಗಿದ್ದು, ಪಾಲಕರು ಮಕ್ಕಳಿಗೆ ಹಣ ಮತ್ತು ಮೊಬೈಲ್ ಸಿಗದಂತೆ ಸಾಧ್ಯವಾದಷ್ಟೂ ಎಚ್ಚರ ವಹಿಸಬೇಕು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ ಹೇಳಿದರು.
ಸಿದ್ದಾರ್ಥ ನಗರದ ಜೆಎಸ್‌ಎಸ್ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ 30ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.


ಆನ್‌ಲೈನ್ ತರಗತಿಗಳಿಂದ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಮೊಬೈಲ್ ಮೇಲೆ ಪ್ರೀತಿ ಹೆಚ್ಚಿದೆ. ವಿದ್ಯಾರ್ಥಿಗಳು ಗೆಲ್ಲುವ ಹಾದಿಯಲ್ಲಿ ಸೋಲನ್ನು ಒಪ್ಪಿಕೊಳ್ಳದ ಮನೋಭಾವ ಬಳಸಿಕೊಳ್ಳಬೇಕು. ನಾವಿಂದು ಸ್ಪರ್ಧಾತ್ಮಕ ಯುಗದಲ್ಲಿ ಇರುವುದರಿಂದ ಜ್ಞಾನ ಸಂಪಾದನೆ ಜತೆಗೆ ಮಾನವನಾಗಿ ಬದುಕಬೇಕೆಂಬ ಮಾನವೀಯ ಗುಣ ನಮ್ಮದಾಗಬೇಕು ಎಂದರು.

ಆರ್.ರಘುನಂದನ್ ಮಾತನಾಡಿ, ವಿದ್ಯಾರ್ಥಿಗಳು ಇಂದು ಭಾರತೀಯ ಸಂಸ್ಕೃತಿಯನ್ನು ಅನುಸರಿಸಬೇಕು. ಈ ದೇಶದ ಮಣ್ಣಿನ ಸೊಗಡು ಮಕ್ಕಳಲ್ಲಿ ಬೇರೂರಬೇಕು ಎಂದರು.
ಪ್ರಾಂಶುಪಾಲರಾದ ಬಿ.ಲತಾ, ಉಪ ಪ್ರಾಂಶುಪಾಲ ಎಸ್.ಎಲ್.ನಾಗೇಂದ್ರ, ಶಂಕರಪ್ಪ ಇತರರಿದ್ದರು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.