ಜಿಲ್ಲೆ

ಕ್ರೀಡೆಗಳಿಂದ ಮಾನಸಿಕ ಸಾಮರ್ಥ್ಯ ಹೆಚ್ಚಳ

ವಿನಯ ಹೆಗಡೆ

ಸಿದ್ದಾಪುರ: ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ, ಮಾನಸಿಕ ಸಮರ್ಥತೆ ಹೆಚ್ಚುತ್ತದೆ ಎಂದು ಬಿಇಒ ಜಿ.ಐ. ನಾಯ್ಕ ಹೇಳಿದರು.

ತಾಲೂಕಿನ ಲಂಬಾಪುರ ಸಮೀಪದ ಗಿಳಸೆ ಮೈದಾನದಲ್ಲಿ ಬಿಳಗಿ ವಲಯಮಟ್ಟದ ಪ್ರೌಢಶಾಲೆಯ ಕ್ರೀಡಾಕೂಟ ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು.

ಶಿಕ್ಷಣ ಪ್ರಸಾರ ಸಮಿತಿಯ ಗೌರವಾಧ್ಯಕ್ಷ ಕೆ.ಐ.ಹೆಗಡೆ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.

ಇಟಗಿ ಗ್ರಾಪಂ ಅಧ್ಯಕ್ಷೆ ಗಿರಿಜಾ ಲೋಕೇಶ ನಾಯ್ಕ ಅಧ್ಯಕ್ಷತೆವಹಿಸಿದ್ದರು.

ಗ್ರಾಪಂ ಉಪಾಧ್ಯಕ್ಷ ರಾಮಚಂದ್ರ ನಾಯ್ಕ ವಾಜಗೋಡ,ವಾಜಗೋಡ ಗ್ರಾಪಂ ಅಧ್ಯಕ್ಷೆ ಸರಸ್ವತಿ ಗೌಡ,ಸದಸ್ಯರಾದ ಮಹೇಶ ನಾಯ್ಕ, ವೆಂಕಟರಮಣ ನಾಯ್ಕ, ಕೃಷ್ಣಮೂರ್ತಿ ಐಸೂರು,ತಾಪಂ ಮಾಜಿ ಅಧ್ಯಕ್ಷ ಸಿ.ಆರ್.ನಾಯ್ಕ, ಸುರೇಂದ್ರ ಗೌಡ,ನಿವೃತ್ತ ಶಿಕ್ಷಕ ಎಲ್.ಜಿ.ನಾಯ್ಕ ಸಂಪಖಂಡ, ಲಿಂಗಪ್ಪ ನಾಯ್ಕ ಇತರರಿದ್ದರು.

ಇಟಗಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಡಿ.ಜಿ.ಪೂಜಾರ ಸ್ವಾಗತಿಸಿದರು. ಆರ್.ಟಿ.ಭಟ್ಟ ನಿರ್ವಹಿಸಿದರು. ಭಾಸ್ಕರ ಭಟ್ಟ ವಂದಿಸಿದರು.