ಗುಳೇದಗುಡ್ಡ ಸಮೀಪದ ಇಂಜನವಾರಿ ಗ್ರಾಮದ ತಿಪ್ಪಣ್ಣ ಗೌಡರ ಅವರ ಜಮೀನಿನಲ್ಲಿ ವಿಶ್ವ ಜೇನು ಸಾಕಣೆ ದಿನ ಆಚರಿಸಲಾಯಿತು. 
ಜಿಲ್ಲೆ

ಜೇನು ಸಾಕಣೆಯಿಂದ ಆದಾಯ ವೃದ್ಧಿ

ದತ್ತಾತ್ರೇಯ ಪಿ ಕುಲಕರ್ಣಿ

ಗುಳೇದಗುಡ್ಡ: ಜೇನು ಸಾಕಣೆ ರೈತರ ಉಪಕಸುಬಾಗಿದೆ. ಕೃಷಿಯೊಂದಿಗೆ ಜೇನು ಸಾಕಣೆ ಮಾಡುವುದರಿಂದ ಲಾಭ ಗಳಿಸಬಹುದು ಎಂದು ಬಾಗಲಕೋಟೆ ತೋಟಗಾರಿಕೆ ವಿವಿ ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು ಬಿ. ಹೇಳಿದರು.

ಸಮೀಪದ ಇಂಜನವಾರಿ ಗ್ರಾಮದ ಜೇನು ಕೃಷಿಕ ತಿಪ್ಪಣ್ಣ ಗೌಡರ ಅವರ ತೋಟದಲ್ಲಿ ಮಂಗಳವಾರ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿವಿ, ಸಿಬಿಬಿಒ ವಿಸ್ತರಣಾ ನಿರ್ದೇಶನಾಲಯ ಹಾಗೂ ಮಕರಂದ ಜೇನು ಕೃಷಿ ರೈತ ಉತ್ಪಾದಕರ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಜೇನು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೇನು ಸಾಕಣೆ ಪ್ರಾತ್ಯಕ್ಷಿಕೆ ನೀಡಿದ ಡಾ. ವೆಂಕಟೇಶಲು ಬಿ., ಜೇನು ಸಾಕಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಒಪ್ಪತ್ತೇಶ್ವರ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಸತ್ಯನಾರಾಯಣ ಸಿ., ಡಾ. ರಾಮನಗೌಡ ಎಚ್., ಬಸನಗೌಡ ಗೌಡರ, ವೀರಯ್ಯಸ್ವಾಮಿ ಸೂಳಿಕೇರಿ, ಶ್ರೀಪಾದ ವಿಶ್ವೇಶ್ವರ, ಜೇನು ಕೃಷಿ ರೈತ ತಿಪ್ಪಣ್ಣ ಗೌಡರ, ಪ್ರಶಾಂತ ನಾಯಕ, ಪುಷ್ಪಾ ಅಂಗಡಿ, ಧರಿಯಪ್ಪ ಕಿತ್ತೂರ, ಮಹಾದೇವ ನಾಯಕ, ವೆಂಕಣ್ಣ ದೇಸಾಯಿ, ರಾಜಗುರು ಹಿರೇಮಠ, ಅಶೋಕ ಚೂರಿ, ಈರಣ್ಣ ಹತ್ತರಗಾಳ, ಪ್ರತಿಕ್ಷಾ ಸಿ.ಟಿ, ಪೂರ್ಣಿಮಾ ಕೊಪ್ಪದ, ಶಿವು ದೇವರಮನಿ, ವೆಂಕಟೇಶ ಭೀಮನಗಡೆ, ನೀಲಕುಮಾರ ಬಳಬಟ್ಟಿ, ಮಹಾದೇವಯ್ಯ ಹಿರೇಮಠ, ಮಲ್ಲಪ್ಪ ಮೇಟಿ, ರಂಗಪ್ಪ ಬಾರಿಗಿಡದ, ಹನಮಂತ ದಿವಿಟಗಿ, ಶಿವಯೋಗಿ ಕೊಣ್ಣೂರ ಮತ್ತಿತರರು ಉಪಸ್ಥಿತರಿದ್ದರು.