ಬನಹಟ್ಟಿಯಲ್ಲಿ ಡಿ.3 ಮತ್ತು 4 ರಂದು ನಡೆಯಲಿರುವ ಆಧ್ಯಾತ್ಮಿಕ ಸಪ್ರಾಹ ಕಾರ್ಯಕ್ರಮದ ಪರಿಕರಗಳನ್ನು ಬಿಡುಗಡೆಗೊಳಿಸಲಾಯಿತು. ಯಲ್ಲಪ್ಪ ಮಹಾರಾಜರು, ಶಾಸಕ ಸಿದ್ದು ಸವದಿ, ಸಿದ್ದನಗೌಡ ಪಾಟೀಲ, ಸುರೇಶ ಚಿಂಡಕ, ಸತೀಶ ಹಜಾರೆ, ಸಿದ್ರಾಮ ಸವದತ್ತಿ ಇತರರಿದ್ದರು. 
ಜಿಲ್ಲೆ

ಡಿ.3 ಮತ್ತು 4 ರಂದು ಇಂಚಗೇರಿ ಸಪ್ತಾಹ ಕಾರ್ಯಕ್ರಮ

Vijayapura - Desk - Gurappa Lokuri

ರಬಕವಿ/ಬನಹಟ್ಟಿ: ಇಂಚಗೇರಿ ಆಧ್ಯಾತ್ಮ ಸಾಂಪ್ರದಾಯದ ಭಕ್ತಿ ಪ್ರಚಾರಕರಾಗಿದ್ದ ಬಸಲಿಂಗಪ್ಪ ಮಹಾರಾಜರ ಹಾಗೂ ಕಾಡಪ್ಪ ಮಹಾರಾಜರ ಪುಣ್ಯತಿಥಿ ಅಂಗವಾಗಿ ಸಪ್ತಾಹ ಕಾರ್ಯಕ್ರಮ ಡಿ.3 ಮತ್ತು 4 ರಂದು ಬನಹಟ್ಟಿಯ ಕೆಎಚ್‌ಡಿಸಿ ಬಳಿಯ ಧ್ಯಾನಾಶ್ರಮದಲ್ಲಿ ನಡೆಯಲಿದೆ ಎಂದು ಯಲ್ಲಪ್ಪ ಮಹಾರಾಜರು ತಿಳಿಸಿದರು.

ಬುಧವಾರ ಕಾರ್ಯಕ್ರಮದ ಪರಿಕರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಂದು ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕರಿಕಟ್ಟಿಯ ಡಾ. ಬಸವರಾಜ ಮಹಾಸ್ವಾಮೀಜಿ, ತೇರದಾಳದ ಗುರುಪಾದೇಶ್ವರ ಶ್ರೀ, ಯಲ್ಲಟ್ಟಿಯ ಬಸಪ್ಪ ಮಹಾರಾಜರು, ಜಗದಾಳದ ಈರಪ್ಪ ಮಹಾರಾಜರು, ಅಸ್ಕಿಯ ಸತ್ಯಪ್ಪ ಮಹಾರಾಜರು, ರಾಮಪೂರದ ಶಿವಾನಂದ ಭಸ್ಮೆ, ಗಿರಮಲ್ಲಪ್ಪ ಚನಾಳ ಮಹಾರಾಜರು ಉಪಸ್ಥಿತರಿರುವರು.

ಡಿ.4 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ರೇವಣಸಿದ್ಧೇಶ್ವರ ಮಹಾರಾಜರು, ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಅಂಬಿಗರ ಚೌಡಯ್ಯ ಸ್ವಾಮೀಜಿ, ಬಂಡಿಗಣಿಯ ಅನ್ನದಾನೇಶ್ವರ ಶ್ರೀಗಳು ವಹಿಸುವರು.

ಶಾಸಕ ಸಿದ್ದು ಸವದಿ, ಸಿದ್ದನಗೌಡ ಪಾಟೀಲ, ಸುರೇಶ ಚಿಂಡಕ, ಸತೀಶ ಹಜಾರೆ, ಸಿದ್ರಾಮ ಸವದತ್ತಿ, ರವಿ ಕರಲಟ್ಟಿ, ರಾಮಣ್ಣ ಭದ್ರನ್ನವರ, ಮಲ್ಲಿಕಾರ್ಜುನ ಬಾಣಕಾರ, ಓಂಪ್ರಕಾಶ ಕಾಬರಾ, ಗೋವಿಂದ ಡಾಗಾ ಮತ್ತಿತರರು ಆಗಮಿಸುವರೆಂದು ಅವರು ತಿಳಿಸಿದರು.