ಬೆಳಗಾವಿ&ಇಂಚಗೇರಿ ಬಸ್​ ಆರಂಭವಾಗಿದ್ದು, ಹೊರ್ತಿಗೆ ಬಸ್​ ಆಗಮಿಸಿದಾಗ ಚಾಲಕ ಮತ್ತು ನಿರ್ವಾಹಕರನ್ನು ಗ್ರಾಮಸ್ಥರು ಸನ್ಮಾನಿಸಿದರು. ಗ್ರಾ.ಪಂ. ಸದಸ್ಯ ಶರಣಬಸು ಡೋಣಗಿ, ಚಾಂದಸಾಬ ಬಿರಾದಾರ, ಶ್ರೀಶೈಲ ಕಂದಗಲ್ಲ, ನಿಂಗಪ್ಪ ಅಳ್ಕೊಳ್ಳಿ, ಸೋಮನಾಥ ಮಂಗಳವೇಡ, ಭೀಮ ಪೂಜಾರಿ, ರಾಹುಲ ಲೋಣಿ, ಮಹಾದೇವ ಸಾಲುಟಗಿ, ಹಿರಾಜ ಹೋಟಗಿ, ಗಡ್ಡಿಲಿಂಗಯ್ಯ ಮಠ, ಮಲ್ಲಯ್ಯ ಗವಿಮಠ ಉಪಸ್ಥಿತರಿದ್ದರು. 
ಜಿಲ್ಲೆ

ಇಂಚಗೇರಿ-ಬೆಳಗಾವಿ ಬಸ್​ ಪುನರಾರಂಭ

Vijayapura - Desk - Shamarao Kulkarni

ಹೊರ್ತಿ: ಬೆಳಗಾವಿಯಿಂದ ಇಂಚಗೇರಿ ವರೆಗೆ ಸಾರಿಗೆ ಸಂಸ್ಥೆಯ ಬಸ್​ ಸಂಚಾರ ಪುರಾರಾರಂಭಗೊಡಿದ್ದು, ಪ್ರಯಾಣಿಕರಲ್ಲಿ ಸಂತಸ ಮೂಡಿದೆ.

ಒಂದು ವರ್ಷದಿಂದ ಬಸ್​ಸಂಚಾರ ರದ್ದು ಮಾಡಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಇದನ್ನರಿತ ಹೊರ್ತಿ ಗ್ರಾ.ಪಂ. ಸದಸ್ಯ ಶರಣಬಸು ಡೋಣಗಿ ನಾಗಠಾಣ ೇತ್ರದ ಶಾಸಕ ವಿಠಲ ಕಟಕದೊಂಡ ಅವರಿಗೆ ಮನವಿ ಸಲ್ಲಿಸಿದ್ದರು.

ಇಂಚಗೇರಿಯಿಂದ ಬೆಳಗ್ಗೆ 6ಕ್ಕೆ ಹೊರಟು, 6.30 ಕ್ಕೆ ಹೊರ್ತಿಗೆ ಆಗಮಿಸುವುದು.7.30ಕ್ಕೆ ವಿಜಯಪುರ ತಲುಪಿ ಗೋಕಾಕ ಮಾರ್ಗವಾಗಿ ಬೆಳಗಾವಿ ತಲುಪುವುದು. ಬಸ್​ ಸಂಚಾರ ಆರಂಭದಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ.

ಚಾಂದಸಾಬ ಬಿರಾದಾರ, ಶ್ರೀಶೈಲ ಕಂದಗಲ್ಲ, ನಿಂಗಪ್ಪ ಅಳ್ಕೊಳ್ಳಿ, ಸೋಮನಾಥ ಮಂಗಳವೇಡ, ಭೀಮ ಪೂಜಾರಿ, ರಾಹುಲ ಲೋಣಿ, ಮಹಾದೇವ ಸಾಲುಟಗಿ, ಹಿರಾಜ ಹೋಟಗಿ, ಗಡ್ಡಿಲಿಂಗಯ್ಯ ಮಠ, ಮಲ್ಲಯ್ಯ ಗವಿಮಠ ಹಾಗೂ ಗ್ರಾಮಸ್ಥರು ಇದ್ದರು.