ಜಿಲ್ಲೆ

VIDEO| ಭಾರತ ದೇಶ ಹಿಟ್ಲರ್​ ಆಡಳಿತದಲ್ಲಿದೆ, ಜನರು ಎಚ್ಚೆತ್ತುಕೊಳ್ಳಬೇಕು: ಕೈ ಶಾಸಕ ವಿನಯ್​ ಕುಲಕರ್ಣಿ

ಧಾರವಾಡ: ಚಂದ್ರಯಾನ-3 ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಇಸ್ರೋ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ವಿಜ್ಞಾನಿಗಳಿಗೆ ಅಭಿನಂದಿಸಿದ್ದಾರೆ. ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಸ್ವಪಕ್ಷದವರನ್ನು ದೂರ ಇಟ್ಟ ವಿಚಾರವಾಗಿ ಪ್ರತಿಕ್ರಿಯಿಸಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್​ ಕುಲಕರ್ಣಿ ದೇಶ ಹಿಟ್ಲರ್​ ಆಡಳಿತದಲ್ಲಿದೆ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.

ಧಾರವಾಡ ಹೊರವಲಯದಲ್ಲಿ ಈ ಕುರಿತು ಮಾತನಾಡಿದ ವಿನಯ್​ ಕುಲಕರ್ಣಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಹಿಟ್ಲರ್​ ಆಡಳಿತಕ್ಕೆ ಒಳಪಡುತ್ತಿದೆ.

ಭಾರತ ದೇಶ ಹಿಟ್ಲರ್​ ಆಡಳಿತಕ್ಕೆ ಒಳಪಡುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಅದು ಜಾರಿಯಾಗಬಹುದು. ಈ ಬಗ್ಗ ಮಾತನಾಡಿದರೆ ನಾವು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಜನರು ಎಚ್ಚೆತ್ತುಕೊಳ್ಳಬೇಕು. ಇವತ್ತು ಸ್ವಪಕ್ಷದವರಿಗೆ ಈ ರೀತಿಯಾದರೆ ವಿರೋಧ ಪಕ್ಷದವರ ಗತಿಯೇನು ಎಂದು ಪ್ರಶ್ನಿಸಿದ್ದಾರೆ.

ತೆರಗಿ ಸಂದಾಯದಲ್ಲಿ ಕರ್ನಾಟಕ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ. ಆದರೆ, ಕೇಂದ್ರ ಸರ್ಕಾರ ನಮಗೆ ಸರಿಯಾಗಿ ಅನುದಾನ ನೀಡುತ್ತಿಲ್ಲ. ಅಕ್ಕಿ ವಿಚಾರದಲ್ಲೂ ಈ ರೀತಿ ಮಾಡಲಾಗುತ್ತಿದ್ದು, ಹಣ ಕೊಡುತ್ತೇವೆ ಎಂದರು ಅವರು ಅಕ್ಕಿ ಕೊಡಲು ಸಿದ್ದರಿಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ಶಾಸಕ ವಿನಯ್​ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.