ಮುದ್ದೇಬಿಹಾಳ ಪಟ್ಟಣದ ಸಂಗೀತಾ ನಾಡಗೌಡ ಅವರನ್ನು ಐಎನ್‌ಬಿಸಿಡಬ್ಲುಎಫ್ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿ ನೇಮಕಗೊಳಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಮಟ್ಟದ ಸಭೆಯಲ್ಲಿ ಆದೇಶ ಪತ್ರ ನೀಡಲಾಯಿತು. ಸೌಮ್ಯಾ ರೆಡ್ಡಿ, ಜಿ.ಆರ್.ದಿನೇಶ ಇತರರಿದ್ದರು. 
ಜಿಲ್ಲೆ

ಐಎನ್‌ಬಿಸಿಡಬ್ಲುಎಫ್ ಅಧ್ಯಕ್ಷರಾಗಿ ಸಂಗೀತಾ ನಾಡಗೌಡ ನೇಮಕ

ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ನಿವಾಸಿ, 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿರುವ ಸಂಗೀತಾ ನೀಲಕಂಠರಾವ ನಾಡಗೌಡ ಅವರು ಕಾಂಗ್ರೆಸ್ ಪಕ್ಷದ ಅಂಗಸಂಸ್ಥೆ ಭಾರತೀಯ ರಾಷ್ಟ್ರೀಯ ಕಟ್ಟಡ ನಿರ್ಮಾಣ, ಅರಣ್ಯ ಮತ್ತು ಕಟ್ಟಿಗೆ ಕಾರ್ಮಿಕರ ಫೆಡರೇಷನ್‌ನ (ಐಎನ್‌ಬಿಸಿಡಬ್ಲುಎಫ್) ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಮಟ್ಟದ ಸಭೆಯಲ್ಲಿ ಆಯ್ಕೆಯಾದ ಅವರಿಗೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ, ಫೆಡರೇಷನ್‌ನ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಜಿ.ಆರ್.ದಿನೇಶ ಅವರು ನೇಮಕಾತಿ ಆದೇಶ ಪತ್ರ ನೀಡಿ ಶುಭ ಕೋರಿದರು.