ವಾಯ್ಸ ಆಫ್ ಪೀಪಲ್ ಸಂಸ್ಥೆಯ ಉದ್ಘಾಟನಾ ಸಮಾರಂಭವನ್ನು ಆ.27 ರಂದು ವಿಜಯನಗರ ರೈಲ್ವೆ ಬಡಾವಣೆಯ ಇಂದಿರಾ ನರ್ಸಿಂಗ್ ಹೋಂ ಎದುರಿನ ಮೈದಾನದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರಿಗೆ ಲಯನ್ಸ್ ಬ್ಲಡ್ ಸೆಂಟರ್, ಜೀವಧಾರ ಸಂಸ್ಥೆ ಸಹಯೋಗದಲ್ಲಿ ಉಚಿತವಾಗಿ ರಕ್ತದೊತ್ತಡ, ಮಧುಮೇಹ ಮತ್ತು ರಕ್ತದಾನ ಆಯೋಜಿಸಲಾಗಿದೆ ಎಂದು ಕಾನೂನು ಸಲಹೆಗಾರ ಪ್ರದೀಪ್ ಬಿಡನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸ್ಥೆಯನ್ನು ಶಾಸಕ ಕೆ.ಹರೀಶ್‌ಗೌಡ ಉದ್ಘಾಟಿಸುವರು. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಸಂಸ್ಥೆ ಮಾಡಲಿದೆ ಎಂದು ಅವರು ಹೇಳಿದರು.
ಪದಾಧಿಕಾರಿಗಳಾದ ಶ್ವೇತಾ, ಅಜಯ್‌ಸಿಂಗ್, ವಸಂತ್ ರಾವ್ ಚೌವ್ಹಾಣ್, ಪಿ.ರಾಕೇಶ್, ಮಧುಸೂದನ್ ಇದ್ದರು.