ಜಿಲ್ಲೆ

ಕಬ್ಬಳದಲ್ಲಿ ಗ್ರಾಮ ಒನ್ ಸೇವಾ ಕೇಂದ್ರ ಉದ್ಘಾಟನೆ

ದಾವಣಗೆರೆ: ಗ್ರಾಮ ಒನ್ ನಾಗರಿಕ ಸೇವಾ ಕೆಂದ್ರದಿಂದ ಜನರ ಶ್ರಮ, ಸಮಯ ಉಳಿತಾಯವಾಗಲಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ನಾಯ್ಕ ಹೇಳಿದರು.

ಕಬ್ಬಳ ಗ್ರಾಮದಲ್ಲಿ ಇತ್ತೀಚೆಗೆ ನೂತನ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಸೇವಾ ಕೇಂದ್ರದ ಮೂಲಕ ಸಾರ್ವಜನಿಕರು ವಿವಿಧ ಪ್ರಮಾಣ ಪತ್ರ ಸೇರಿ ಹತ್ತಾರು ರೀತಿಯ ಸೇವೆ ಪಡೆಯಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮದ ಹಟ್ಟಿ ನಾಯಕ ಮಲ್ಲಿಕಾರ್ಜುನ್ ನಾಯ್ಕ ಮಾತನಾಡಿ, ಗ್ರಾಮಸ್ಥರು ವಿವಿಧ ಇಲಾಖೆಗಳ ಸೇವೆ ಪಡೆಯಲು ಜಿಲ್ಲೆ , ತಾಲೂಕು ಮತ್ತು ಹೋಬಳಿ ಕಚೇರಿಗಳಿಗೆ ಭೇಟಿ ನೀಡಬೇಕಾಗಿತ್ತು. ಈಗ ಮಧ್ಯವರ್ತಿಗಳ ಹಾವಳಿ ಇಲ್ಲದೆ ಕೇಂದ್ರದ ಮೂಲಕ ಸೇವೆ ಪಡೆಯಬಹುದಾಗಿದೆ ಎಂದರು.

ಭೀಮಾನಾಯ್ಕ, ಮಂಜ ನಾಯ್ಕ, ಗೋವಿಂದ್ ನಾಯ್ಕ, ಸ್ವಾಮಿ, ಸಂತೋಷ್, ಸತ್ಯನಾರಾಯಣ, ಎಂ. ಅಭಿಲಾಷ್ ಇತರರು ಇದ್ದರು.