ರೋಟರಿ ಕ್ಲಬ್‌ನ ಅಸಿಸ್ಟೆಂಟ್ ಗವರ್ನರ್ ರಾಘವೇಂದ್ರ ಭಟ್ ಮಾತನಾಡುತ್ತಿರುವುದು.  
ಜಿಲ್ಲೆ

ವೇಣೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಸಂಘ ಉದ್ಘಾಟನೆ

ಬೆಳ್ತಂಗಡಿ: ವೇಣೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎನ್‌ಎಸ್‌ಎಸ್ ಘಟಕ, ಇಕೋ ಕ್ಲಬ್ ಹಾಗೂ ಇಎಲ್‌ಸಿ ಸಹಯೋಗದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಮಾಹಿತಿ ಕಾರ್ಯಾಗಾರ ನಡೆಯಿತು.

ಶಾಲಾ ಉಪ ಪ್ರಾಂಶುಪಾಲ ವೆಂಕಟೇಶ ಎಸ್.ತುಳುಪುಳೆ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ವಕೀಲ ಹಾಗೂ ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಅಧ್ಯಕ್ಷ ಶಿವಯ್ಯ ಎಲ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾದಕ ದ್ರವ್ಯ ವ್ಯಸನ ಹಾಗೂ ಕಾನೂನು ಬಗ್ಗೆ ಮಾಹಿತಿ ನೀಡಿದರು. ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ರಾಘವೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.

ಸಂಸ್ಥೆಯ ಹಿರಿಯ ಶಿಕ್ಷಕಿ ಭಾಷಿಣಿ, ಇಎಲ್‌ಸಿ ಮಾರ್ಗದರ್ಶಕಿ ಸುಶೀಲಾ ಜಿ, ಪ್ರೇಮಾ ಕೆ, ಶಾಲಾ ನೂತನ ನಾಯಕಿ ಶರಣ್ಯ, ಉಪನಾಯಕ ಮೇಘಶಾಮ್ ಉಪಸ್ಥಿತರಿದ್ದರು.

ಇಕೋ ಕ್ಲಬ್ ಮಾರ್ಗದರ್ಶಕಿ ಪವಿತ್ರ ಕೋಟಿಯಾನ್ ಸ್ವಾಗತಿಸಿದರು. ಸಂಧ್ಯಾಕುಮಾರಿ ವಂದಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಹಾಗೂ ಶಿಕ್ಷಕ ರವೀಂದ್ರ ಕೆ. ನಿರೂಪಿಸಿದರು.