ಜಿಲ್ಲೆ

ಭಾರತೀಯ ವೈದ್ಯರಿಗಿದೆ ವಿದೇಶಿ ಬೇಡಿಕೆ : ಡಾ.ಶರಣ ಪ್ರಕಾಶ್ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಭಾರತದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದರಿಂದ ಇಲ್ಲಿನ ವೈದ್ಯರಿಗೆ ವಿದೇಶದಲ್ಲಿ ಬೇಡಿಕೆಯಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು.

ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ವತಿಯಂದ ನಾಟೆಕಲ್ ನಲ್ಲಿರುವ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‌ನಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಆರಂಭಿಸಿರುವ ಇಂಟರ್ ವೆನ್ಷನಲ್ ಕೆಥಟರೈಝೇಶನ್ ಲ್ಯಾಬ್ ವಿದ್ ಲೆವೆಲ್ 3 ಐಸಿಯು ಮತ್ತು ಒಟಿ ವಿದ್ ಎಚ್‌ಇಪಿಎ ಮೊಡ್ಯೂಲ್, ಕ್ಯಾತ್ ಲ್ಯಾಬ್ ನ್ಯೂರಾಲಜಿ ಸ್ಟ್ರೋಕ್ ಮ್ಯಾನೇಜ್‌ಮೆಂಟ್, ಆಂಕೊ ಸರ್ಜರಿ ಮತ್ತು ಇಂಟರ್ ವೆನ್ಷನಲ್ ರೇಡಿಯೋಲಜಿ ವಿಭಾಗ, ಕಣಚೂರು ಆಯುರ್ವೇದ ಆಸ್ಪತ್ರೆ ಕಟ್ಟಡ, ಫಾರ್ಮಸಿ ಕಾಲೇಜು, ಸುಸಜ್ಜಿತ ಅಡಿಟೋರಿಯಂ ಉದ್ಘಾಟಿಸಿ ಕಣಚೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಡಾ.ಯು.ಕೆ.ಮೋನು ಅವರ ಜೀವನ ಕಥೆ ಯುವಜನರಿಗೆ ಪ್ರೇರಣೆ. ಸಮಾಜದಲ್ಲಿ ಪ್ರತಿಯೊಬ್ಬರೂ ಅತ್ಯಂತ ದೊಡ್ಡ ಸ್ಥಾನ ತಲುಪಬೇಕು ಎನ್ನುವುದೇ ಕಣಚೂರು ಶಿಕ್ಷಣ ಸಂಸ್ಥೆಯ ಕನಸು ಎಂದು ಉನ್ನತ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು.

ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ.ಯು.ಕೆ.ಮೋನು ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಎಸ್‌ಸಿಡಿಸಿಸಿ ಅಧ್ಯಕ್ಷ ರಾಜೇಂದ್ರ ಕುಮಾರ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಯೆನೆಪೋಯ ವಿವಿ ಕುಲಪತಿ ವೈ.ಅಬ್ದುಲ್ಲಾ ಕುಂಞ, ಶಾಸಕ ಅಶೋಕ್ ರೈ, ಮಾಜಿ ಸಚಿವೆ ಮೋಟಮ್ಮಾ, ಕರ್ನಾಟಕ ಅಲೈಡ್ ಹೆಲ್ತ್ ಸಯನ್ಸಸ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕರ್ ಫರೀದ್, ಎಂಎಲ್‌ಸಿ ಎಸ್.ಎಲ್.ಭೋಜೆಗೌಡ, ಮಾಜಿ ಸಚಿವ ಬಿ.ರಮಾನಾಥ ರೈ, ಆಸ್ಪತ್ರೆಯ ಡೀನ್ ಶಹನವಾಝ್ ಮಾಣಿಪ್ಪಾಡಿ, ಕೊಲ್ಲಂ ಅಝೀಝಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ ನಿರ್ದೇಶಕ ಡಾ.ಹಾಶಿಂ ಅಝೀಝ್, ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ.ಮೊಹಮ್ಮದ್ ಇಸ್ಮಾಯಿಲ್, ಮಾಜಿ ಶಾಸಕ ಮೊಯಿದ್ದೀನ್ ಬಾವ ಉಪಸ್ಥಿತರಿದ್ದರು.

ಕಣಚೂರು ಸಮೂಹ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹ್ಮಾನ್ ಪ್ರಸ್ತಾವನೆಗೈದರು.

ಪುಸ್ತಕ ಬಿಡುಗಡೆ, ಸನ್ಮಾನ

ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ.ಯು.ಕೆ.ಮೋನು ಅವರ ಜೀವನ ಕಥನ ಸಾಹಸಿ ಸಾಧಕ ಪುಸ್ತಕ ಬಿಡುಗಡೆಗೊಳಿಸಲಾಯಿತು. ನಿವೃತ್ತ ಶಿಕ್ಷಕರಾದ ವೆಂಕಪ್ಪ ಮಾಸ್ಟರ್, ಶಂಕರ್ ಭಟ್, ಬೆನ್ನಿ ಡಿಸೋಜ, ಕೃತಿಯ ಸಂಪಾದಕ ಮುಳಿಯ ಶಂಕರ್ ಭಟ್ ಅವರನ್ನು ಸನ್ಮಾನಿಸಲಾಯಿತು.

ಕಣಚೂರು ಸಂಸ್ಥೆ ಅತ್ಯಂತ ಕಡಿಮೆ ಅವಧಿಯಲ್ಲಿ ಬೃಹತ್ ಸಂಸ್ಥೆಯಾಗಿ ಮೂಡಿಬರಲು ಇಚ್ಛಾಶಕ್ತಿ ಕಾರಣ. ಈ ಭಾಗದಲ್ಲಿ ಕಿ.ಮೀ. ಅಂತರದಲ್ಲಿ ಮೂರು ವೈದ್ಯಕೀಯ ಕಾಲೇಜುಗಳಿದ್ದು ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯಾಗಿದೆ ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ ಮಗನಿಗೆ ಪಿಯುಸಿ ಸೇರಿಸುವ ನಿಟ್ಟಿನಲ್ಲಿ ಒಂದು ಕಾಲೇಜಿಗೆ ಪತ್ನಿ ಜತೆ ಬೆಳಗ್ಗೆ 10 ಗಂಟೆಗೆ ಹೋಗಿ ಕಾದು ಕುಳಿತಿದ್ದು ಸಂಜೆ ನಾಲ್ಕು ಗಂಟೆಗೆ ನಮ್ಮನ್ನು ಕರೆದು ನಿಮ್ಮ ಮಗನಿಗೆ ಮುಂದಿನ ವರ್ಷ ಸೀಟಿಲ್ಲ ಎಂದಾಗ ಶಿಕ್ಷಣ ನಿಲ್ಲಿಸುವಂತೆ ಹೇಳಿದ್ದೆ, ಆದರೆ ಬೇರೊಂದು ಕಾಲೇಜಿನಲ್ಲಿ ಸೀಟು ಸಿಕ್ಕಿತು. ಕಾಲೇಜಿನಲ್ಲಾದ ಆ ನೋವು ಸಂಸ್ಥೆ ಕಟ್ಟಲು ಪ್ರೇರಣೆ ನೀಡಿತು. ಡಾ.ಯು.ಕೆ.ಮೋನು, ಸ್ಥಾಪಕಾಧ್ಯಕ್ಷ, ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ https://www.vijayavani.net/protest-against-dialysis-center https://www.vijayavani.net/puttige-temple-bramhakalsha