ವನವಾಸಿ ಕಲ್ಯಾಣ ಕರ್ನಾಟಕ ಪ್ರಾಂತ ಕಾರ್ಯಾಲಯ ‘ವನಶ್ರೀ’ ನಗರದ ಬಸವೇಶ್ವರ ರಸ್ತೆಯಲ್ಲಿ ಆ.28ರಂದು ಬೆಳಗ್ಗೆ 11 ಗಂಟೆ ಉದ್ಘಾಟನೆಗೊಳ್ಳಲಿದೆ ಎಂದು ನಿವೃತ್ತ ತಹಸೀಲ್ದಾರ್ ಡಾ. ರಂಗನಾಥ್ ತಿಳಿಸಿದರು.
ಅಕ್ಕಮ್ಮಣ್ಣಿ ಆಸ್ಪತ್ರೆ ಹಿಂಭಾಗದಲ್ಲಿ ನಿರ್ಮಿಸಿರುವ ವನಶ್ರೀಯನ್ನು ಆರ್‌ಎಸ್‌ಎಸ್ ಮುಖಂಡ ಮುಕುಂದ ಉದ್ಘಾಟಿಸುವರು. ವನವಾಸಿ ಕಲ್ಯಾಣದ ಅಧ್ಯಕ್ಷ ಮನು ಕಾವೇರಪ್ಪ ಚಕ್ಕೇರ ಅಧ್ಯಕ್ಷತೆ ವಹಿಸುವರು. ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ರಮೇಶ್‌ಬಾಬು ಪ್ರಾಸ್ತಾವಿಕ ಭಾಷಣ ಮಾಡುತ್ತಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ಮುಖಂಡರಾದ ತಮ್ಮಯ್ಯ, ಸತ್ಯಕೀರ್ತಿ ಇದ್ದರು.