ವಿಜಯವಾಣಿ ಸುದ್ದಿಜಾಲ ಉಡುಪಿ
ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಕೊರತೆಯಿಂದ ಅವುಗಳನ್ನು ಪಡೆದುಕೊಳ್ಳಲಾಗದೆ ವಂಚಿತರಾಗುತ್ತಿದ್ದಾರೆ. ಹೀಗಾಗಿ ವೃತ್ತಿಪರ ಸಂಘಟನೆಗಳು ಶಿಬಿರ, ಕಾರ್ಯಾಗಾರ ಆಯೋಜಿಸಿ ಅಂತಹವರಿಗೆ ಸೌಲಭ್ಯ ಕೊಡಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಅಸಂಘಟಿತರಿಗೂ ಸೌಕರ್ಯ ಸಿಗುವಂತಾಗಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಬೈಲೂರಿನ ಆಶಾನಿಲಯದಲ್ಲಿ ಫೆ.22ರಂದು ಆಯೋಜಿಸಿದ್ದ ಜಿಲ್ಲಾ ಗ್ಯಾರೇಜು ಮಾಲೀಕರ ಮಹಾಸಭೆ ಮತ್ತು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆ ಜಾರಿಗೊಳಿಸಿದ್ದು ಸದುಪಯೋಗ ಮಾಡಿಕೊಳ್ಳಬೇಕು. ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘದ ನಿವೇಶನ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಮಿಕ ಸಚಿವ ಮತ್ತು ಮುಖ್ಯಮಂತ್ರಿಯನ್ನು ಸಂಪರ್ಕಿಸಿ ಪ್ರಯತ್ನಿಸುತ್ತೇನೆ ಎಂದರು.
ಗ್ಯಾರೇಜ್ ಕ್ಷೇತ್ರದಲ್ಲಿ ಐದು ದಶಕಕ್ಕಿಂತ ಹೆಚ್ಚು ಕಾಲ ಸೇವೆ ಮಾಡಿದ ಉಡುಪಿಯ ಕ್ರಿಷ್ಟಿ ಕರ್ಕಡ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕುಂದಾಪುರ ತಾಲೂಕಿನ ಸಂಚಾಲಕ ನಾರಾಯಣ ಆಚಾರ್ಯ, ಶ್ರೀರಾಮ ಕ್ರೆಡಿಟ್ ಕೋ- ಆಪರೇಟಿವ್ನ ನಿರ್ದೇಶಕರಾಗಿ ಆಯ್ಕೆಯಾದ ಕೃಷ್ಣಯ್ಯ ಮದ್ದೋಡಿ ಅವರನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕ ಸಾಧಕರಾದ ಅಲ್ವಿಶಾ ಸಿಲ್ವಸ್ಟರ್ ಡಿಸೋಜ, ಸೋಹನ್ ಡಿ. ಸುವರ್ಣ, ಭವೇಶ್ ಜೆ. ಸುವರ್ಣ, ಕೃಪಾ ಕೃಷ್ಣ ಆಚಾರ್ಯ ಕಾಪು, ಸ್ವಯಂಪ್ರಕಾಶ್ ಆರ್. ಶೇಟ್. ಹರ್ಷಿತಾ ಆರ್. ದೇವಾಡಿಗ ಇವರನ್ನು ಗೌರವಿಸಲಾಯಿತು. ಸಂಕಷ್ಟಕ್ಕೀಡಾದ ಸಂಘದ ಸದಸ್ಯರಿಗೆ ಸಹಾಯಧನ ವಿತರಿಸಲಾಯಿತು.
ಇಎಸ್ಐ ಕುರಿತು ಗಣೇಶ್ ಜಿ. ಮಾಹಿತಿ ನೀಡಿದರು. ಭಾರತೀಯ ಅಂಚೆ ಇಲಾಖೆಯಿಂದ ಆಧಾರ್ ತಿದ್ದುಪಡಿ ಮತ್ತು ಅಂಚೆ ವಿಮಾ ಯೋಜನೆಗಳ ನೋಂದಣಿ ನಡೆಸಲಾಯಿತು. ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಕಾರ್ಮಿಕ ನಿರೀಕ್ಷಕ ವಿಜಯೇಂದ್ರ, ಮಣಿಪಾಲ ಕೌಶಲ ತರಬೇತಿ ಕೇಂದ್ರದ ಆಡಳಿತ ಅಧಿಕಾರಿ ಡಾ.ಕಾಂತರಾಜ್ ಎ.ಎನ್., ಸಂಘದ ಸ್ಥಾಪಕಾಧ್ಯಕ್ಷ ಪ್ರಭಾಕರ್ ಕೆ., ಚೇರ್ಮನ್ ವಿಲ್ಸನ್ ಅಂಚನ್, ಗೌರವ ಸಲಹೆಗಾರರಾದ ಯಾದವ್ ಶೆಟ್ಟಿಗಾರ್, ಉದಯಕಿರಣ್, ಜಯ ಸುವರ್ಣ, ಉಪಾಧ್ಯಕ್ಷರಾದ ರಾಜೇಶ್ ಜತ್ತನ್, ವಿನಯಕುಮಾರ್ ಕಲ್ಮಾಡಿ, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘದ ಚೇರ್ಮನ್ ದಿವಾಕರ್ ಎಂ., ಅಧ್ಯಕ್ಷರಾದ ದಿನಕರ್ ಕುಲಾಲ್, ಉದ್ಯಮಿ ವೈ. ಸುಕುಮಾರ್ ಶೆಟ್ಟಿ, ಸರ್ವೇಯರ್ ನವೀನ್ಚಂದ್ರ ಸುವರ್ಣ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಸಂತೋಷಕುಮಾರ್ ಸ್ವಾಗತಿಸಿದರು. ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು. ವಿನಯ್ ವಂದಿಸಿದರು.