ಜಿಲ್ಲೆ

ನಾಡಿನ ಜಾನಪದ ಕ್ರೀಡೆಯಲ್ಲಿದೆ ಸಹಜತೆ...

ಸುಗುಣೇಂದ್ರ ತೀರ್ಥ ಶ್ರೀಪಾದರ ಅಭಿಮತ

ತುಳುನಾಡ ಗೊಬ್ಬುಲ್​ ಕ್ರೀಡಾಕೂಟ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ತುಳುನಾಡಿನ ಪ್ರಾಚೀನ ಕ್ರೀಡಾ ಸಿರಿಯನ್ನು ಯುವ ಸಮುದಾಯಕ್ಕೆ ತಿಳಿಯಪಡಿಸಲು ಆಧುನಿಕ ಕ್ರೀಡೆಯಲ್ಲಿ ಕೇವಲ ರಂಜನೆ ಸಿಗುತ್ತದೆ. ಆದರೆ, ನಮ್ಮ ಜಾನಪದ ಕ್ರೀಡೆಯಲ್ಲಿ ಸಹಜತೆ ಇದೆ. ವಿಶೇಷ ಸೊಗಡಿದ್ದು, ಜ್ಞಾನವೂ ವೃದ್ಧಿಯಾಗುತ್ತದೆ. ತುಳುನಾಡಿನ ಕ್ರೀಡೆಗಳು ಪರಿಸರಕ್ಕೆ ಹತ್ತಿರವಾದ ಹಾಗೂ ಪೂರಕವಾದ ಜಾನಪದ ಕ್ರೀಡೆಗಳಾಗಿವೆ. ಇವುಗಳ ರಕ್ಷಣೆ ಅತ್ಯಗತ್ಯ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡಪಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಗೀತಾ ಮಂದಿರದಲ್ಲಿ ನಡೆಯುತ್ತಿರುವ ಭಾರತ ಮೇಳದ ನಿಮಿತ್ತ ತುಳು ಕೂಟ (ರಿ.) ಉಡುಪಿ ಆಯೋಜನೆಯಲ್ಲಿ ಲಯನ್ಸ್​ ಕ್ಲಬ್​ ಉಡುಪಿ ಇಂದ್ರಾಳಿ ಹಾಗೂ ಎಸ್​ಎಎಸ್​ಎಸ್​ ಉಡುಪಿ ಜಿಲ್ಲಾ ಮತ್ತು ತಾಲೂಕು ಮಹಿಳಾ ಘಟಕಗಳ ಸಹಭಾಗಿತ್ವದಲ್ಲಿ ಗೀತಾ ಮಂದಿರದ ವಠಾರದಲ್ಲಿ ಏ.19ರಂದು ಬೆಳಗ್ಗೆ ಆಯೋಜಿಸಿದ್ದ ತುಳುನಾಡ ಗೊಬ್ಬುಲ್​ ಕ್ರೀಡಾಕೂಟವನ್ನು ಚೆನ್ನೆಮಣೆ ಆಡುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು.

ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ., ಪದಾಧಿಕಾರಿ ಡಾ. ವಿ.ಕೆ. ಯಾದವ್​, ಲಯನ್ಸ್​ ಕ್ಲಬ್​ ಉಡುಪಿ ಅಧ್ಯಕ್ಷ ಲಕ್ಷ್ಮೀಕಾಂತ ಬೆಸ್ಕೂರು, ಕೋಶಾಧಿಕಾರಿ ದಿವಾಕರ ಶೆಟ್ಟಿ, ಕ್ರೀಡಾಕೂಟದ ಸಂಚಾಲಕ ರತ್ನಾಕರ ಇಂದ್ರಾಳಿ, ತಾರಾ ಸತೀಶ, ವಿದ್ಯಾ, ದಿನೇಶ ಶೆಟ್ಟಿಗಾರ ಇತರರು ಉಪಸ್ಥಿತರಿದ್ದರು. ಭಾರತ ಮೇಳದ ಸಂಚಾಲಕ ಕೆ.ವಿ. ರಮಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಹದಿನಾರು ಬಗೆಯ ಸ್ಪರ್ಧೆ

ಕ್ರೀಡಾಕೂಟದಲ್ಲಿ 16 ಬಗೆಯ ಸ್ಪರ್ಧೆ ಆಯೋಜಿಸಿದ್ದು ಸಾರ್ವಜನಿಕರು, ಬಾಲಕ-ಬಾಲಕಿಯರು ಮತ್ತು ಮಕ್ಕಳ ವಿಭಾಗವಾಗಿ ವಿಂಗಡಿಸಲಾಗಿತ್ತು. ತುಳುನಾಡಿನ ವಿಶೇಷ ಆಕರ್ಷಣೆಯ ಸ್ಪರ್ಧೆಗಳಾದ ಕರ ದರ್ಪುನು, ಮಡಲು ಮುಡೆವುನು, ತಾರಾಯಿ ಚೆಪ್ಪು ಕಲೆಪಿನಿ, ತಾರಾಯಿ ಕಟ್ಟುನು, ಚೆನ್ನಮಣೆ, ಪೊಕ್ಕಾಟ, ಗೇರುಬೀಜ ಆಟ, ಸೋಪ್ಪಾಟ, ಬಿಲ್ಲ್​ ಒಯಿಪುನು, ಪಲ್ಲೆದಾಟ, ಜಿಬಿಲಿ, ನೆಲಕ್​ ಬೂರಂದಿ ಕೋಲು ಇತ್ಯಾದಿ ಸ್ಪರ್ಧೆ ನಡೆದವು.