ಜಿಲ್ಲೆ

ವಿಪ್ರ ಮಹಿಳೆಯರ ಸಾಲಿಗ್ರಾಮ ವಲಯ ಉದ್ಘಾಟನೆ

ಕೋಟ: ವಿಪ್ರ ಮಹಿಳೆಯರ ಸಾಲಿಗ್ರಾಮ ವಲಯ ಉದ್ಘಾಟನಾ ಸಮಾರಂಭ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಜ್ಞಾನಮಂದಿರದಲ್ಲಿ ಇತ್ತೀಚೆಗೆ ಜರಗಿತು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಉದ್ಘಾಟಿಸಿದರು.

ಬ್ರಹ್ಮಾವರ ತಾಲೂಕು ಮಹಿಳಾ ವಲಯ ಅಧ್ಯಕ್ಷೆ ಮಂಜುಳಾ ಅಡಿಗ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲ ಆಡಳಿತ ಮಂಡಳಿ ಸದಸ್ಯ ಕೆ.ಅನಂತಪದ್ಮನಾಭ ಐತಾಳ, ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ಅಧ್ಯಕ್ಷ ಶಿವರಾಮ ಉಡುಪ, ವಿಪ್ರ ಮಹಿಳೆಯರ ಸಾಲಿಗ್ರಾಮ ವಲಯ ಅಧ್ಯಕ್ಷೆ ವನಿತಾ ಉಪಾಧ್ಯಾ ಉಪಸ್ಥಿತರಿದ್ದರು. ಜಾಹ್ನವಿ ಹೇರ್ಳೆ ಸ್ವಾಗತಿಸಿದರು. ಸದಸ್ಯೆ ಸ್ಮಿತಾ ರಾಣಿ ವಂದಿಸಿದರು. ಪೂರ್ಣಿಮಾ ಅಧಿಕಾರಿ ನಿರೂಪಿಸಿದರು.