ಜಿಲ್ಲೆ

ವಾಣಿ ವಿದ್ಯಾಸಂಸ್ಥೆಗಳ ನೂತನ ಕಟ್ಟಡ, ಸಭಾಭವನ ಉದ್ಘಾಟನೆ : 20ರಂದು ಶೃಂಗೇರಿ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಲೋಕಾರ್ಪಣೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ನೇತೃತ್ವದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಂದ ಹಾಗೂ ವಾಣಿ ವಿದ್ಯಾಸಂಸ್ಥೆಗಳ ನೂತನ ಕಟ್ಟಡ ಹಾಗೂ ಸಭಾಭವನದ ಲೋಕಾರ್ಪಣೆ ಸಮಾರಂಭ ಏ.20ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ ಎಂದು ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗೌರವಾಧ್ಯಕ್ಷ ಎಚ್.ಪದ್ಮ ಗೌಡ ತಿಳಿಸಿದರು.  ಮಾ

ಶೃಂಗೇರಿ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಕಟ್ಟಡ ಲೋಕಾರ್ಪಣೆಗೊಳಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುವಾರ್ ಉದ್ಘಾಟಿಸಲಿದ್ದಾರೆ. ಸಂಘ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೃಷಿ ಸಚಿವ ಚೆಲುವರಾಯ ಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸರ್ವೋಚ್ಚ ನ್ಯಾಯಾಲಯದ ಸೀನಿಯರ್ ಅಡ್ವಾಕೇಟ್ ಶೇಖರ ಜಿ.ದೇವಸ, ಸಂಸದ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಎಂ.ಎಲ್.ಸಿ.ಗಳಾದ ಭೋಜೇ ಗೌಡ, ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಬೊಟ್ಯಾಡಿ, ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಪ್ರಜ್ವಲ್, ಹಾವೇರಿ ಜಾನಪದ ವಿವಿ ವಿಶ್ರಾಂತ ಉಪಕುಲಪತಿ ಡಾ.ಕೆ.ಚಿನ್ನಪ್ಪ ಗೌಡ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಮಾಜಿ ಎಂಎಲ್‌ಸಿ ಕೆ.ಹರೀಶ್‌ಕುವಾರ್, ಸಂಘದ ಜಿಲ್ಲಾಧ್ಯಕ್ಷ ಲೋಕಯ್ಯ ಗೌಡ, ತಾಲೂಕು ಸಂಘ ಗೌರವಾಧ್ಯಕ್ಷ ಎಚ್.ಪದ್ಮಗೌಡ, ಬೆಂಗಳೂರಿನ ಉದ್ಯಮಿ ಕಿರಣ್‌ಚಂದ್ರ ಡಿ.ಪುಷ್ಪಗಿರಿ, ಧರ್ಮದರ್ಶಿ ನಾರಾಯಣ ಬೇಗೂರು, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಸುದ್ದಗೋಷ್ಠಿಯಲ್ಲಿ ಸೇವಾ ಸಂದ ಅಧ್ಯಕ್ಷ ಕುಶಾಲಪ್ಪ ಗೌಡ, ಕಾರ್ಯದರ್ಶಿ ಗಣೇಶ್ ಗೌಡ, ಕಾರ್ಯಕ್ರಮ ಸಂಯೋಜಕ ಯುವರಾಜ್ ಅನಾರು, ಉಪಾಧ್ಯಕ್ಷ ಧರ್ಣಪ್ಪ ಗೌಡ ಬಾನಡ್ಕ, ಜತೆ ಕಾರ್ಯದರ್ಶಿ ಶ್ರೀನಾಥ್, ಸಂಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ನಿರ್ದೇಶಕರಾದ ಮಾಧವ ಗೌಡ ಬೆಳ್ತಂಗಡಿ, ದಿನೇಶ್ ಗೌಡ ಕೊಯ್ಯೂರು, ಉಷಾದೇವಿ ಉಜಿರೆ, ವಸಂತ ನಡ, ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾರಾಮಣ್ಣ ಗೌಡ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಉಪಸ್ಥಿತರಿದ್ದರು.

ದ.ಕ. ಜಿಲ್ಲೆಯ ಗೌಡ ಸಮಾಜದವರಿಗೆ ಶೃಂಗೇರಿ ಶಾರದಾ ಪೀಠ ಗುರುಪೀಠ, ಕುಲಗುರುಗಳು ಶೃಂಗೇರಿ ಗುರುಗಳಾಗಿದ್ದಾರೆ. ಶ್ರೀ ಆದಿಚುಂಚನ ಗಿರಿ ಸಮುದಾಯದ ಮಠವಾಗಿದೆ. ಸವಾಜದ ಗುರುಗಳಾಗಿ ಆದಿಚುಂಚನಗಿರಿ ಸ್ವಾಮೀಜಿ ಅವರನ್ನು ಸ್ವೀಕರಿಸಿದ್ದೇವೆ. ಅನೇಕ ಬಾರಿ ಕರೆದಿದ್ದೇವೆ. ನಮಗೆ ಶೃಂಗೇರಿ ಮತ್ತು ಆದಿಚುಂಚನಗಿರಿ ಎರಡು ಮಠಗಳ ಮೇಲೂ ಅಪೂರ್ವ ಗೌರವ, ಅದಮ್ಯ ಪ್ರೀತಿ, ಅಭಿಮಾನವಿದೆ. ಆದರೆ ಇತ್ತೀಚೆಗೆ ಬೆಳ್ತಂಗಡಿ ತಾಲೂಕು ಒಕ್ಕಲಿಗರ, ಗೌಡರ ಸೇವಾ ಟ್ರಸ್ಟ್ ಗೊಂದಲದ ಹೇಳಿಕೆ ನೀಡಿ ಶೃಂಗೇರಿ ಮತ್ತು ಆದಿಚುಂಚನಗಿರಿ ಮಠಕ್ಕೆ ಅವಮಾನ ಮಾಡಿದೆ. ಇದನ್ನು ನಾವು ಖಂಡಿಸುತ್ತೇವೆ. ಎಚ್.ಪದ್ಮಗೌಡ, ಗೌರವಾಧ್ಯಕ್ಷರು, ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ https://www.vijayavani.net/3-additional-underpasses-in-nelyadi-town https://www.vijayavani.net/summer-camp-4