ಯಲ್ಲಾಪುರ: ಪಟ್ಟಣದ ದರ್ಗಾ ಗಲ್ಲಿಯಲ್ಲಿ ನೂತನವಾಗಿ ನಿರ್ವಿುಸಿರುವ ದರ್ಗಾ ಕಟ್ಟಡ ಉದ್ಘಾಟನೆ ಹಾಗೂ ಉರುಸು ಕಾರ್ಯಕ್ರಮ ಡಿ. 21 ರಿಂದ 24ರವರೆಗೆ ನಡೆಯಲಿದೆ ಎಂದು ಉರುಸು ಸಮಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಸೈಯದ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 21ರಂದು ತಿಲಾವತ್ ಮತ್ತು ಝೆಂಡಾ ಸೆರಮನಿ ನಡೆಯಲಿದೆ. 22ರಂದು ಸಂಜೆ 5ಕ್ಕೆ ಅಕ್ಬರ ಗಲ್ಲಿಯಿಂದ ಮೆರವಣಿಗೆ ಪ್ರಾರಂಭಿಸಲಾಗುವುದು. ಪಟ್ಟಣದ ವಿವಿಧೆಡೆ ಸಂಚರಿಸಿ ದರ್ಗಾದಲ್ಲಿ ಮೆರವಣಿಗೆ ಸಂಪನ್ನಗೊಳ್ಳಲಿದೆ. ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಕೇರಳ ಕಾಸರಗೋಡ ನೂರ್-ಎ- ಇಸ್ಲಾಂ ಅವರಿಂದ ಉರ್ದಾ ಧಾರ್ವಿುಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
23ರಂದು ಸಂಜೆ 7ಕ್ಕೆ ಮೆರವಣಿಗೆ, ಸರ್ವಧರ್ಮ ಅನ್ನ ಸಂತರ್ಪಣೆ ನಡೆಯಲಿದೆ. ಸಮದಾ ಮಿನಿಯಾ ಖಚೋಚಾ ಶರೀಫ ಉತ್ತರ ಪ್ರದೇಶ, ವಿಜಯಪುರದ ಹನೀಫ ರಜಾಕ್ ಅವರಿಂದ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಡಿ. 24ರಂದು ಖವಾಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಸಮಿತಿಯ ಪ್ರಮುಖರಾದ ಅಬ್ದುಲ್ ಕರೀಂ ಉಮರಶೇಖ್, ಟಿ.ಪಿ. ಸುಲೇಮಾನ್, ಅಬ್ದುಲ್ ಹಮೀದ್ ಮುಲ್ಲಾ, ಖಾಜಾ ಮೈನುದ್ದೀನ್ ಅತ್ತಾರ, ನಿಜಾಮುದ್ದೀನ್ ಟಿ.ಪಿ, ಶಾಬಾದ್ ಸೈಯದ್ ಇದ್ದರು.