ಗೋಕಾಕ: ದೇಶದಲ್ಲಿ ಅಸಂಖ್ಯಾತ ಸಮುದಾಯಗಳಿದ್ದರೂ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಮೂಡಿಸುವಲ್ಲಿ ಧಾರ್ಮಿಕ ಶಕ್ತಿಯ ಪಾತ್ರ ಪ್ರಮುಖವಾಗಿದೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ನಲ್ಲಾನಟ್ಟಿ ಗ್ರಾಮದ ಗದಾಡಿ ತೋಟದ ಶ್ರೀ ಕರೆಮ್ಮದೇವಿ ದೇವಸ್ಥಾನದ ಬಳಿ ರಾಜ್ಯಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಡಿ ನಿರ್ಮಿಸಿರುವ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.
ಗ್ರಾಮದ ಕರೇಮ್ಮದೇವಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಜನರ ಸಹಕಾರ ಪ್ರಮುಖವಾಗಿದೆ. ಶ್ರದ್ಧಾ, ಭಕ್ತಿಯಿಂದ ಹಾಗೂ ನಿಸ್ವಾರ್ಥ ಸೇವೆಯಿಂದ ದೇವಸ್ಥಾನ ಅಭಿವೃದ್ಧಿಗೆ ಸಾಧ್ಯವಾಗುತ್ತದೆ. ರಸ್ತೆ, ಶೌಚಗೃಹ, ಕುಡಿಯುವ ನೀರು, ಶಾಲೆಗಳಿಗೆ ಮೂಲ ಸೌಲಭ್ಯ ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ ಸಹಕಾರ ನೀಡುವ ಮೂಲಕ ನಲ್ಲಾನಟ್ಟಿಯನ್ನು ಸಂಸದರ ಆದರ್ಶ ಗ್ರಾಮವನ್ನಾಗಿಸಲು ಶ್ರಮ ವಹಿಸಲಾಗುವುದು ಎಂದರು.
ಕೆಆರ್‌ಐಡಿಎಲ್ ಕಾರ್ಯಪಾಲಕ ಅಭಿಯಂತ ರೇಣುಜ್ಯೋತಿ ನಾರಾಯಕರ, ದಶರಥ ಪಾಟೀಲ, ಬಸಪ್ಪ ಗದಾಡಿ, ಮುದಕಪ್ಪ ಗದಾಡಿ, ಗಂಗಪ್ಪ ಗದಾಡಿ, ಲಗಮಣ್ಣ ಕುಳ್ಳೂರ, ಮಲ್ಲಪ್ಪ ಪೂಜೇರಿ, ಮಾರುತಿ ಮೆಳವಂಕಿ, ಪ್ರಕಾಶ ಜಾಗನೂರ, ರಂಗಪ್ಪ ಕುಳ್ಳೂರ, ರಾಮಚಂದ್ರ ಕುಳ್ಳೂರ, ದಶರಥ ಗದಾಡಿ, ಪಿಡಿಒ ಗಣೇಶ ಇತರರಿದ್ದರು.