ಜಿಲ್ಲೆ

ತಾತ್ಕಾಲಿಕ ಶಾಲೆ, ಗ್ರಂಥಾಲಯ ಉದ್ಘಾಟನೆ

ಅವಿನಾಶ್ ಜೈನಹಳ್ಳಿ

ಮೈಸೂರು: ಮಾವುತರು, ಕಾವಾಡಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಅರಮನೆ ಅಂಗಳದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಶಾಲೆ ಹಾಗೂ ಗ್ರಂಥಾಲಯವನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು.


ಈ ವೇಳೆ ಮಕ್ಕಳು ವಿವಿಧ ವೇಷಭೂಷಣ ತೊಟ್ಟು ಪ್ರದರ್ಶಿಸಿದ ನೋಡುಗರ ಗಮನ ಸೆಳೆದರು. ಕಾಂತಾರ ಚಿತ್ರದ ವರಾಹ ರೂಪಂ…, ಜೋಗಿ ಚಿತ್ರದ ಏಳು ಮಲೆ ಮೇಲೇರಿ ಕುಂತಾ ನೋಡು ಮಾದೇವ… ಹಾಡಿಗೆ ಹಾಗೂ ತಮ್ಮ ಹಾಡಿಯ ಸಂಪ್ರದಾಯ ನೃತ್ಯ ಪ್ರದರ್ಶಿಸಿದರು. ಸಚಿವ ಮಹದೇವಪ್ಪ, ಸಂಸದ ಪ್ರತಾಪಸಿಂಹ, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ ಮಕ್ಕಳ ನೃತ್ಯಕ್ಕೆ ಮನಸೋತು ಅವರೊಂದಿಗೆ ಫೋಟೊ ತೆಗೆಸಿಕೊಂಡರು.