ಜಿಲ್ಲೆ

ಮಹಿಳೆಯರಿಗೆ ಅಗತ್ಯ ಸ್ವಾವಲಂಬಿ ಜೀವನ :ಸ್ವರ್ಣಗೌರಿ ಹೇಳಿಕೆ

ಸೌಮ್ಯ ಆರ್

ಕೊಕ್ಕಡ: ಟೈಲರಿಂಗ್ ಕಲಿಯುವುದರಿಂದ ಸ್ವಉದ್ಯೋಗದ ಅವಕಾಶವಿರುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ಯಾರಿಗೂ ಅವಲಂಬಿತವಾಗದೆ ಸ್ವಾವಲಂಬಿ ಜೀವನ ನಡೆಸುವುದು ಅಗತ್ಯ ಎಂದು ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷೆ ಸ್ವರ್ಣಗೌರಿ ಹೇಳಿದರು.

ಅರಸಿನಮಕ್ಕಿ, ಅಂಗನವಾಡಿ ಕೇಂದ್ರ, ನಾವಳೆ-ಪಾಲೆಂಜದಲ್ಲಿ ಮಂಗಳವಾರ ಸೇವಾಭಾರತಿ ಕನ್ಯಾಡಿ ನೇತೃತ್ವದಲ್ಲಿ, ಸಬಲಿನಿ ಯೋಜನೆಯಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅರಸಿನಮಕ್ಕಿ-ಶಿಶಿಲ ಸಹಭಾಗಿತ್ವದೊಂದಿಗೆ ಮಹಿಳೆಯರಿಗಾಗಿ 30ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಅರಸಿನಮಕ್ಕಿ ಸಮಾಜ ಸೇವಕ ಧರ್ಮರಾಜ ಗೌಡ ಅಡ್ಕಾಡಿ ಶುಭಹಾರೈಸಿದರು. ಅರಿಕೆಗುಡ್ಡೆ ಜೀರ್ಣೋದ್ಧಾರ ಸಮಿತಿ ಶ್ರೀ ವನದುರ್ಗ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಪಿಲಿಕಬೆ, ಅರಸಿನಮಕ್ಕಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಹಾಗೂ ನೂತನ ಹಾಲಿ ಸದಸ್ಯ ರಾಘವೇಂದ್ರ ನಾಯಕ್ ಬರ್ಗುಳ, ಅರಸಿನಮಕ್ಕಿ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಜಯಪ್ರಸಾದ್ ಶೆಟ್ಟಿಗಾರ್, ಕನ್ಯಾಡಿ ಶ್ರೀ ದುರ್ಗಾ ಮಾತೃಮಂಡಳಿ ಅಧ್ಯಕ್ಷೆ ಶಾಂತಾ ಪಿ.ಶೆಟ್ಟಿ, ಅರಿಕೆಗುಡ್ಡೆ ಶ್ರೀ ವನದುರ್ಗ ದೇವಸ್ಥಾನದ ಮಹಿಳಾ ಕಾರ್ಯದರ್ಶಿ ನೀತಾ ರಾಧೇಶ್ ಆಚಾರ್ಯ, ನಾವಳೆ-ಪಾಲೆಂಜ ಬಾಲವಿಕಾಸ ಕೇಂದ್ರದ ಅಧ್ಯಕ್ಷೆ ಕೇಶಾವತಿ, ನಾವಳೆ ಟೈಲರಿಂಗ್ ತರಬೇತಿದಾರೆ ವಿಮಲಾ ಆರ್.ಶೆಟ್ಟಿ ಉಪಸ್ಥಿತರಿದ್ದರು.

23 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಪೂರ್ಣಿಮಾ ಸ್ವಾಗತಿಸಿ, ಸೇವಾಭಾರತಿಯ ಕಾರ್ಡಿನೇಟರ್ ಸುಮಾ ನಿರೂಪಿಸಿ, ನಮಿತಾ ವಂದಿಸಿದರು.