ಕಾರ್ಗಲ್‌ನಲ್ಲಿ ನೂತನ ತಬಲಾ ತರಬೇತಿ ಶಾಲೆಯನ್ನು ವಿದುಷಿ ಚೇತನಾ ರಾಜೀವ್ ರಾವ್ ಉದ್ಘಾಟಿಸಿದರು. ಪೂರ್ಣಿಮಾ, ಅಕ್ಷರ ಇಂದ್ರ, ಅಶೋಕ್, ಗುರುರಾಜ್ ಇತರರಿದ್ದರು. 
ಜಿಲ್ಲೆ

ತಬಲಾ ತರಬೇತಿ ಕೇಂದ್ರ ಉದ್ಘಾಟನೆ

Shivamogga - Desk - Megha MS

ಕಾರ್ಗಲ್: ಸಂಗೀತ ಕ್ಷೇತ್ರದಲ್ಲಿ ತಬಲಾ ವಾದನವು ವಿಶೇಷ ಮಹತ್ವ ಪಡೆದುಕೊಂಡಿದೆ ಎಂದು ವಿದುಷಿ ಚೇತನಾ ರಾಜೀವ್ ರಾವ್ ತಿಳಿಸಿದರು. ಭಾನುವಾರ ಆಸಕ್ತ ಮಕ್ಕಳ ಕಲಿಕೆಗಾಗಿ ಇಲ್ಲಿನ ಕೆಪಿಸಿ ಅಫೀಷಿಯಲ್ಸ್ ರಿಕ್ರಿಯೇಶನ್ ಕ್ಲಬ್ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂತನವಾಗಿ ಸಾಗರದ ತೇಜಸ್ವಿ ತಬಲಾ ವಿದ್ಯಾಲಯದಿಂದ ತಬಲಾ ವಾದನ ತರಬೇತಿ ಶಾಲೆ ಉದ್ಘಾಟಿಸಿ ಮಾತನಾಡಿದರು. ಸಂಗೀತದಲ್ಲಿ ಹಿಮ್ಮೇಳವಾಗಿ ತನ್ನದೇ ಛಾಪು ಮೂಡಿಸುವ ತಬಲಾ ವಾದನವು ಆಸಕ್ತ ಮಕ್ಕಳ ಕಲಿಕೆಗೆ ಪೂರಕವಾಗಿದ್ದು, ಶರಾವತಿ ಕಣಿವೆ ಪ್ರದೇಶದಲ್ಲಿ ಆರಂಭವಾದ ಈ ಕಲೆಯನ್ನು ಶ್ರದ್ಧಾಭಕ್ತಿಯಿಂದ ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕೆಪಿಸಿ ಸಿಬ್ಬಂದಿ ಅಧಿಕಾರಿ ಪೂರ್ಣಿಮಾ ಗಿಡ್ಡಪ್ಪ ಗೌಡ, ತೇಜಸ್ವಿ ತಬಲಾ ಸಂಸ್ಥೆ ಶಿಕ್ಷಕ ವಿದ್ವಾನ್ ಅಕ್ಷರ ಇಂದ್ರ, ಪ್ರಮುಖರಾದ ಅಶೋಕ್ ಇಂದ್ರ, ಗುರುರಾಜ್, ವಿ.ಸಂತೋಷ್‌ಕುಮಾರ್, ಗೌರಮ್ಮ ನರಸಿಂಹಮೂರ್ತಿ, ಜ್ಯೋತಿ ನೇಮಿರಾಜ್ ಇತರರಿದ್ದರು.