ಹಿಂದು ವಿದ್ಯಾದಾಯಿನೀ ಸಂಘ ಸುರತ್ಕಲ್ ಹಾಗೂ ವಿದ್ಯಾದಾಯಿನೀ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ತರಬೇತಿ ಸಂಸ್ಥೆ (ವಿರಾಟ್) ಇವರ ಜಂಟಿ ಆಶ್ರಯದಲ್ಲಿ ವಿದ್ಯಾದಾಯಿನೀ ಪ್ರೌಢ ಶಾಲಾ ವಠಾರದಲ್ಲಿ ನಡೆದ 2 ದಿನಗಳ ಹಲಸು, ಮಾವು ಮೇಳ ಹಾಗೂ ಸ್ವಾವಲಂಬಿ ಸಂತೆಯ ಉದ್ಘಾಟಣೆ ನಡೆಯಿತು. 
ಜಿಲ್ಲೆ

ಸ್ವಾವಲಂಬಿ ಸಂತೆಯ ಉದ್ಘಾಟಣೆ

Mangaluru - Shravan Kumar Nala

ಹಿಂದು ವಿದ್ಯಾದಾಯಿನೀ ಸಂಘ ಸುರತ್ಕಲ್ ಹಾಗೂ ವಿದ್ಯಾದಾಯಿನೀ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ತರಬೇತಿ ಸಂಸ್ಥೆ (ವಿರಾಟ್) ಇವರ ಜಂಟಿ ಆಶ್ರಯದಲ್ಲಿ ವಿದ್ಯಾದಾಯಿನೀ ಪ್ರೌಢ ಶಾಲಾ ವಠಾರದಲ್ಲಿ ನಡೆದ 2 ದಿನಗಳ ಹಲಸು, ಮಾವು ಮೇಳ ಹಾಗೂ ಸ್ವಾವಲಂಬಿ ಸಂತೆಯ ಉದ್ಘಾಟಣೆ ನಡೆಯಿತು.

ಬಿಎಎಸ್‌ಎಫ್ ಮಾನವ ಸಂಪನ್ಮೂಲ ಆಧಿಕಾರಿ ಸಂತೋಷ್ ಪೈ ಕಾರ್ಯಕ್ರಮ ಉದ್ಘಾಟಿಸಿದರು.

ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ವರುಣ ಚೌಟ, ಉದ್ಯಮಿ ಡೋನಿ ಸುವಾರಿಸ್ ಬಾಳ, ಮಂಗಳೂರು ವಿಭಾಗ ಅಂಚೆ ಇಲಾಖೆಯ ಮುಖ್ಯ ಅಧೀಕ್ಷಕ ಸುಧಾಕರ ಮಲ್ಯ, ಹಿಂದು ವಿದ್ಯಾದಾಯಿನೀ ಸಂಘ ಕಾರ್ಯದರ್ಶಿಶ್ರೀರಂಗ ಎಚ್, ಮೇಳದ ಸಂಚಾಲಕ ರಮೇಶ್ ಟಿ.ಎನ್, ಖಜಾಂತಿ ಕಾಂತ ಟಿ.ಸೇರಿದಂತೆ ಹಲವರು ಇದ್ದರು.

ಅಂಚೆ ಇಲಾಖೆ, ಮಂಗಳೂರು ವಿಭಾಗ ಇವರು ನಡೆಸಿದ ಎರಡು ದಿನಗಳ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಹಾಗೂ ಜನಸಂಪರ್ಕ ಅಭಿಯಾನದ ಸದುಪಯೋಗವನ್ನು ನೂರಾರು ಸಾರ್ವಜನಿಕರು ಪಡೆದರು. ಸ್ವಾವಲಂಬಿ ಸಂತೆಯಲ್ಲಿ 80ಕ್ಕೂ ಹೆಚ್ಚು ವ್ಯಾಪಾರಸ್ಥರು ಭಾಗವಹಿಸಿ ಹಲಸು ಮಾವು ಹಾಗೂ ಅವುಗಳಿಂದ ತಯಾರಿಸಿದ ಮೌಲ್ಯವರ್ದಿತ ಉತ್ಪನ್ನಗಳನ್ನು, ಮನೆಯಲ್ಲಿ ತಯಾರಿಸಿದ ತಿಂಡಿ, ತಿನಸುಗಳನ್ನು, ಗೃಹಪಯೋಗಿ ವಸ್ತುಗಳನ್ನು ಮಾರಾಟ ಮಾಡಿದ್ದರು.

ಹಿಂದು ವಿದ್ಯಾದಾಯಿನೀ ಸಂಘ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.