ಗುರುಪುರ: ವ್ಯಾಪಾರ ಉದ್ದಿಮೆಯಲ್ಲಿ ಗ್ರಾಹಕರು ಮತ್ತು ನೌಕರರ ಮಧ್ಯೆ ಸ್ನೇಹ ಬಾಂಧವ್ಯ ಇಟ್ಟುಕೊಂಡು ಸಂಸ್ಥೆಯ ಉನ್ನತಿಯ ಗುರಿ ಇಟ್ಟುಕೊಳ್ಳಬೇಕು. ಅಂತಹ ಗುಣಧರ್ಮ ಮಂಗಳೂರಿನ ಸ್ವಪ್ನ ಎಂಟರ್‌ಪ್ರೈಸೆಸ್‌ನ ಮಾಲೀಕ ವಿನಯಾನಂದ ಅವರಿಗಿದ್ದು, ಅವರಿಂದ ಉತ್ತಮ ಸಮಾಜಸೇವೆ ನಡೆಯಲಿ ಎಂದು ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಅರುಣ್ ಐತಾಳ್ ಆಶಿಸಿದರು.
ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ನಡೆದ ಸ್ವಪ್ನ ಎಂಟರ್‌ಪ್ರೈಸೆಸ್ ಸಂಸ್ಥೆಯ ನೂತನ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಾಜಿ ಸಂಸದ ಅಧ್ಯಕ್ಷತೆ ವಹಿಸಿದ್ದರು. ಉರ್ವಸ್ಟೋರ್‌ನ ಶ್ರೀ ಮಹಾಗಣಪತಿ ದೇವಸ್ಥಾನ ಅಧ್ಯಕ್ಷ ಸುಧೀಂದ್ರ ರಾವ್, ಮಂಗಳಾದೇವಿ ದೇವಸ್ಥಾನ ಅನುವಂಶಿಕ ಮೊಕ್ತೇಸರ ಹರೀಶ್ ಐತಾಳ್, ಲೇಡಿಹಿಲ್‌ನ ಎಸ್.ಎಲ್.ಶೇಟ್ ಡೈಮಂಡ್ ಹೌಸ್‌ನ ರವೀಂದ್ರ ಶೇಟ್, ಸಂಪಿಗೆ ರೆಸಾರ್ಟ್‌ನ ಮಹಾ ಪ್ರಬಂಧಕ ಪ್ರಸಾದ್ ಎಂ.ಜಿ., ಹೊಳೆನರಸೀಪುರದ ಪುಟ್ಟರಾಜು ಗೌಡ, ಮಂಗಳೂರಿನ ಉದ್ಯಮಿಗಳಾದ ಅಬ್ದುಲ್ ಹಮೀದ್, ನವೀನ್ ಅಂಚನ್, ರಾಜೇಶ್ವರಿ ವಿನಯಾನಂದ, ಹರ್ಷಿತಾ ಬಿ.ಕೆ., ರೂಪಕ್ ಕಡಬ, ಮಾನವ ಸಂಪನ್ಮೂಲ ಅಧಿಕಾರಿ ಹರ್ಷಿತ್ ಕುಮಾರ್ ಮತ್ತು ಗಂಗಾಧರ ಮೊದಲಾದವರಿದ್ದರು.
ಶಿಕ್ಷಕ ವಾಸುದೇವ ರಾವ್ ಕುಡುಪು ಸ್ವಾಗತಿಸಿದರು. ಕೆ.ವಿನಯಾನಂದ ನಿರೂಪಿಸಿದರು.