ಜಿಲ್ಲೆ

ಸಿದ್ಧಾಂತ ಶಿಖಾಮಣಿ-ವಚನ ಸಾಹಿತ್ಯ ಎರಡು ಕಣ್ಣುಗಳಿದ್ದಂತೆ

ಬಸವಕಲ್ಯಾಣ: ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಎರಡು ಕಣ್ಣುಗಳು ಇದ್ದಂತೆ. ಆದರೆ ದೃಷ್ಟಿ ಒಂದೇ ಎಂದು ಹಿರೇನಾಗಾಂವನ ಶ್ರೀ ಜಯಶಾಂತಲಿಂಗ ಸ್ವಾಮೀಜಿ ನುಡಿದರು.

ಪವಿತ್ರ ಶ್ರಾವಣ ಮಾಸ ನಿಮಿತ್ತ ಸಂಸ್ಥಾನ ಗವಿಮಠದಲ್ಲಿ ಸಂಸ್ಥಾನ ಗವಿಮಠ ಟ್ರಸ್ಟ್ ಹಾಗೂ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ತಾಲೂಕು ಘಟಕ ಸಹಯೋಗದಲ್ಲಿ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಮಾಲೆ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಜಗದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಬೋಧಿಸಿದ ಸಿದ್ಧಾಂತ ಶಿಖಾಮಣಿ ಹಾಗೂ ಶಿವಶರಣರು ರಚಿಸಿದ ವಚನ ಸಾಹಿತ್ಯ ಮೋಕ್ಷ ಮಾರ್ಗತೋರುವ ಮಹತ್ವದ ಸಾಹಿತ್ಯವಾಗಿವೆ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಸರಿಯಾಗಿ ಅರಿತು ನಡೆದರೆ ಜನುಮ ಸಾರ್ಥಕವಾಗುತ್ತದೆ. ಮುಂಬರುವ ವರ್ಷದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಸಮಾರಂಭಕ್ಕೆ ಪ್ರಯತ್ನಿಸಲಾಗುತ್ತಿದ್ದು, ಸಿದ್ಧತೆಗೆ ಸಮಸ್ತ ಸದ್ಭಕ್ತರು ಸಿದ್ಧರಾಗಬೇಕಿದೆ ಎಂದರು.

ಸಂಸ್ಥಾನ ಗವಿಮಠ ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಪ್ರೊ.ಸೂರ್ಯಕಾಂತ ಶೀಲವಂತ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಗುರು ರಮೇಶ ರಾಜೋಳೆ ನಿರೂಪಣೆ ಮಾಡಿದರು. ಶರಣಬಸವ ಅಲಗುಡೆ ಪ್ರಾರ್ಥನೆ ಹಾಡಿದರು.

ಸಂಸ್ಥೆ ಉಪಾಧ್ಯಕ್ಷ ಚಂದ್ರಕಾಂತ ಪಾಟೀಲ್, ಸಂಸ್ಥೆ ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ ಶೀಲವಂತ, ನಿವೃತ್ತ ಕೃಷಿ ಅಧಿಕಾರಿ ಬಸವಂತಪ್ಪ ಲವಾರೆ, ಪ್ರಾಚಾರ್ಯ ಎ.ಜಿ.ಪಾಟೀಲ್, ಪ್ರೊ.ರುದ್ರೇಶ್ವರ ಗೋರ್ಟಾ, ಲಕ್ಷ್ಮಣ ಸಿಂಗಾರೆ, ದಯಾನಂದ ಶೀಲವಂತ, ಪ್ರೊ.ಶಾಂತಲಿಂಗ ಮಠಪತಿ, ಗೋವಿಂದರೆಡ್ಡಿ, ಮಲ್ಲಿಕಾರ್ಜುನ ಅಲಗುಡೆ, ಬಸವಣ್ಣಪ್ಪ ನೆಲೋಗಿ, ಶಿವಶಂಕರ ರಾಮಣ್ಣನವರ, ವೀರಶೆಟ್ಟಿ ಎಂ.ಪಾಟೀಲ್, ಲಿಂಗರಾಜ ಬಿರಾದಾರ, ವಿಮಲಾಬಾಯಿ ಬಿರಾದಾರ, ಸವಿತಾ ಸ್ವಾಮಿ, ಅಂಜನಾ ಮೂಲಗೆ, ಸರೋಜನಿ ಹಿರೇಮಠ ಇತರರಿದ್ದರು.