ಮಂತ್ರಾಲಯದಲ್ಲಿ ಶ್ರೀ ಮೂಲರಾಮ ನಿಲಯ ವಸತಿಗೃಹವನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಸೋಮವಾರ ಉದ್ಘಾಟಿಸಿದರು. ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ಆಡಳಿತಾಧಿಕಾರಿ ಎನ್.ಮಾಧವಶೆಟ್ಟಿ, ದಾನಿ ಸೋಮಶೇಖರ ಇದ್ದರು. 
ಜಿಲ್ಲೆ

ಶ್ರೀ ಮೂಲರಾಮ ನಿಲಯ ವಸತಿಗೃಹ ಉದ್ಘಾಟನೆ

Gangavati - Desk - Veeresh S Ullagaddi

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ಮೂಲರಾಮ ನಿಲಯ ವಸತಿಗೃಹವನ್ನು ರಾಯರ ಮಠದ ಪೀಠಾಧಿಪತಿ ಶ್ರೀ ಡಾ.ಸುಬುಧೇಂದ್ರ ತೀರ್ಥರು ಸೋಮವಾರ ಉದ್ಘಾಟಿಸಿದರು.


ಬೆಂಗಳೂರು ಮೂಲದ ರಾಯರ ಪರಮ ಭಕ್ತ, ಉದ್ಯಮಿ ಸೋಮಶೇಖರ ಅವರು 12 ಕೋಟಿ ರೂ. ವೆಚ್ಚದಲ್ಲಿ 102 ಕೊಠಡಿಗಳ ವಸತಿನಿಲಯ ನಿರ್ಮಾಣ ಮಾಡಿ ರಾಯರ ಸೇವೆಗೆ ಮುಂದಾಗಿದ್ದಾರೆ.

ಕರೊನಾ ಸಂದರ್ಭ ಆರಂಭವಾದ ನಿರ್ಮಾಣ ಕಾರ್ಯವು ಆರಾಧನೆ ಹತ್ತಿರವಿರುವಾಗ ಪೂರ್ಣಗೊಂಡಿದೆ. ರಾಯರ ಭಕ್ತರು ಹಲವಾರು ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ಒಂದೆರಡು ಕೊಠಡಿ ನಿರ್ಮಾಣಕ್ಕೆ ದೇಣಿಗೆ ನೀಡಿದರೆ, ಸೋಮಶೇಖರ ಅವರು ವಸತಿ ಗೃಹವನ್ನು ತಾವೊಬ್ಬರೇ ನಿರ್ಮಾಣ ಮಾಡುವುದಾಗಿ ಮುಂದೆ ಬಂದು, ಅದನ್ನು ಪೂರ್ಣಗೊಳಿಸಿ ಶ್ರೀಮಠಕ್ಕೆ ಹಸ್ತಾಂತರಿಸಿದ್ದಾರೆ.


ಶ್ರೀಮಠದ ಪಂಡಿತರು ಸೋಮವಾರ ಪೂಜಾ, ವಿಧಿ-ವಿಧಾನಗಳನ್ನು ನೆರವೇರಿಸಿದರೆ ಡಾ.ಸುಬುಧೇಂದ್ರ ತೀರ್ಥರು ಉದ್ಘಾಟನೆ ನೆರವೇರಿಸಿ, ಸೋಮಶೇಖರ ಮತ್ತು ಕುಟುಂಬ ವರ್ಗದವರನ್ನು ಸನ್ಮಾನಿಸಿ, ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ಆಡಳಿತಾಧಿಕಾರಿ ಎನ್.ಮಾಧವಶೆಟ್ಟಿ, ದಾನಿ ಸೋಮಶೇಖರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.