ಜಿಲ್ಲೆ

ಕುಂದಾಪುರ-ಹಾವೇರಿಯಲ್ಲಿ ಶಿರಸಿ ಅರ್ಬನ್ ಬ್ಯಾಂಕ್ ಶಾಖೆ ಉದ್ಘಾಟನೆ

ಶಿರಸಿ: ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ 17ನೇ ಶಾಖೆಯನ್ನು ಸೆ.8ರಂದು ಕುಂದಾಪುರದಲ್ಲಿ ಹಾಗೂ 18ನೇ ಶಾಖೆಯನ್ನು ಸೆ.11ರಂದು ಹಾವೇರಿಯಲ್ಲಿ ಉದ್ಘಾಟಿಸಲಾಯಿತು.

ಕುಂದಾಪುರದ ವಡೇರ ಹೋಬಳಿಯಲ್ಲಿರುವ ಬೆನಕಾ ಟೂರ್ಸ್‌ನಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಹಾವೇರಿಯ ಎಲ್‌ಐಸಿ ಕಚೇರಿ ಹತ್ತಿರದ ಕಟ್ಟಡದಲ್ಲಿ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಉದ್ಘಾಟಿಸಿದರು.

ಬ್ಯಾಂಕ್ ಅಧ್ಯಕ್ಷ ಜಯದೇವ ನಿಲೇಕಣಿ ಮಾತನಾಡಿ, ಬ್ಯಾಂಕ್ ಆಧುನಿಕ ತಂತ್ರಜ್ಞಾನಪೂರಿತ ಸೇವೆ ಒದಗಿಸುತ್ತಿದೆ. ಗ್ರಾಹಕರು ಬ್ಯಾಂಕ್ ಸಾಲ, ಮುಂಗಡ ಮತ್ತು ಠೇವಣಿ ಯೋಜನೆಗಳ ಲಾಭ ಪಡೆಯುವಂತೆ ವಿನಂತಿಸಿದರು.

ಶಾಸಕ ಕಿರಣ್ ಕುಮಾರ್ ಕೂಡ್ಗಿ ಮಾತನಾಡಿ, ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ 117ವರ್ಷಗಳ ಇತಿಹಾಸ ಹೊಂದಿರುವ ದಿ ಶಿರಸಿ ಅರ್ಬನ್ ಬ್ಯಾಂಕ್ ಕುಂದಾಪುರದಲ್ಲಿಯೂ ಜನಮನ ಗೆದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.

ಉಪವಿಭಾಗಾಧಿಕಾರಿ ರಶ್ಮಿ ಎಸ್. ಆರ್., ಪುರಸಭೆ ಸದಸ್ಯರಾದ ರೋಹಿಣಿ ಉದಯಕುಮಾರ್ ಹಾಗೂ ಶೇಖರ ಪೂಜಾರಿ, ಉದ್ಯಮಿ ಕೆ. ಪ್ರಭಾಕರ ಪ್ರಭು ಇತರರು ಉಪಸ್ಥಿತರಿದ್ದರು.