ಜಿಲ್ಲೆ

ಧ್ವಜಾರೋಹಣ, ಅನಾವರಣದಲ್ಲಿದೆ ವ್ಯತ್ಯಾಸ...

ಯುವ ವಕೀಲ ಶ್ರೀನಿಧಿ ಹೆಗ್ಡೆ ಮಾಹಿತಿ

ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸ್ವಾತಂತ್ರ್ಯ ಲಭಿಸಿದ ಹಿನ್ನೆಲೆಯಲ್ಲಿ ಬ್ರಿಟಿಷರ ಧ್ವಜ ಇಳಿಸಿ ಭಾರತದ ತ್ರಿವರ್ಣ ಧ್ವಜ ಏರಿಸಿದ್ದರಿಂದ ಆಗಸ್ಟ್​ 15ರಂದು ಧ್ವಜಾರೋಹಣ ಮಾಡುತ್ತೇವೆ. ಸ್ವಾತಂತ್ರ್ಯದ ಬಳಿಕ 2 ವರ್ಷ 11 ತಿಂಗಳು 18 ದಿನದಲ್ಲಿ ರಚನೆಯಾದ ಸಂವಿಧಾನ ಅಂಗೀಕರಿಸಿ, ರಾಜತಂತ್ರದಿಂದ ಗಣತಂತ್ರ ವ್ಯವಸ್ಥೆಗೆ ಬದಲಾಗಿದ್ದರ ಪ್ರತಿಕವಾಗಿ ಜನವರಿ 26ರಂದು ಧ್ವಜ ಅನಾವರಣಗೊಳಿಸಿ ಗಣರಾಜ್ಯೋತ್ಸವ ಆಚರಿಸುತ್ತೇವೆ. ಹೀಗಾಗಿ ಮಕ್ಕಳು ಧ್ಜಜ ಆರೋಹಣ ಹಾಗೂ ಅನಾವರಣದ ಮಾಹಿತಿಯನ್ನೂ ಅರಿತುಕೊಳ್ಳಬೇಕು ಎಂದು ವಕೀಲ ಶ್ರೀನಿಧಿ ಹೆಗ್ಡೆ ತಿಳಿಸಿದರು.

ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಸಮೂಹ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ವ್ಯತ್ಯಾಸ, ವಿಶೇಷತೆ ಮತ್ತು ರಾಷ್ಟ್ರಕ್ಕೆ ಸಂಬಂಧಿತ ಅನೇಕ ವಿಚಾರ ತಿಳಿಸಿದರು.

ಶಾಲಾ ಸಂಚಾಲಕ ಕೆ. ಅಣ್ಣಪ್ಪ ಶೆಣೈ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಶಶಿರಾಜ್​ ಕುಂದರ್​, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಕೆ.ವಿನಾಯಕ ಕಿಣಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕಿ ರೇಷ್ಮಾ ಪ್ರಭು, ಶಾಲೆಯ ಶಿಕ್ಷಕರು ಮತ್ತು ಶಿಕ್ಷಕೇತರ ವರ್ಗ, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿನಿ ದಿಶಾ ಸಾಲ್​ವಂಕರ್​ ಸ್ವಾಗತಿಸಿದರು. ಅಭಿರಾಮ್​ ಪಲಿಮಾರು ವಂದಿಸಿದರು. ಲಿಖಿತಾ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.