ಬೆಳ್ತಂಗಡಿ: ನಾವು ಪಡೆದಿರುವ ಜ್ಞಾನ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಹಾಗೂ ಎಲ್ಲರೊಳಗೆ ಒಂದಾಗಲು ಸಂಘಗಳು ಪ್ರೇರಕ ಎಂದು ವೈದ್ಯ ಡಾ.ಪ್ರದೀಪ್ ನಾವರ ಹೇಳಿದರು.
ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ(ಸಿ.ಬಿ.ಎಸ್.ಇ) ಶಾಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ಶಾಲಾ ಸಂಘಗಳ ಉದ್ಘಾಟಿಸಿ ಮಾತನಾಡಿದರು.
ಶಾಲೆ ವಿವಿಧ ಸಂಘಗಳಾದ ಸಾಂಸ್ಕೃತಿಕ ಸಂಘ, ಭಿತ್ತಿ ಪತ್ರಿಕೆ ಸಂಘ, ಕಲಾ ಸಂಘ, ಹವ್ಯಾಸ ಸಂಘ, ಕ್ರೀಡಾ ಸಂಘ, ಇಂಟರ‌್ಯಾಕ್ಟ್ ಸಂಘ, ಪರಿಸರ ಸಂಘ, ಕನ್ನಡ ಸಂಘ, ವಿಜ್ಞಾನ ಸಂಘ, ಸಾಹಿತ್ಯ ಸಂಘ, ಗಣಿತ ಸಂಘ ಉದ್ಘಾಟನೆಗೊಂಡಿತು. ಮುಖ್ಯ ಶಿಕ್ಷಕ ಮನ್ಮೋಹನ್ ನಾಯ್ಕ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಅಕ್ಷಮ್ ಜೈನ್, ಅವನಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ಮನ್ಮೋಹನ್ ನಾಯ್ಕ ಕೆ.ಜಿ. ಸ್ವಾಗತಿಸಿದರು. ವಿದ್ಯಾರ್ಥಿ ಸಾವನ್ ವಂದಿಸಿದರು.