ಜಿಲ್ಲೆ

ಸೇಲ್ಸ್‌ಮನ್ ಸಂಸ್ಥೆ ಉದ್ಘಾಟನೆ ಸೆ.24ಕ್ಕೆ

ಮೈಸೂರು: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸಂಘಟಿತ ವಲಯಕ್ಕೆ ಸೇರಿದ ಸೇಲ್ಸ್‌ಮನ್‌ಗಳ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು, ಸೆ.24ರ ಬೆಳಗ್ಗೆ 10.30ಕ್ಕೆ ಕೃಷ್ಣಮೂರ್ತಿಪುರಂನಲ್ಲಿನ ಹೊಟೇಲ್ ಮಾಲೀಕರ ಸಂಘದ ಸಭಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಕಾನೂನು ಸಲಹೆಗಾರ ಎಂ.ಎಸ್. ರವೀಂದ್ರ ತಿಳಿಸಿದರು.

ಶಾಸಕರಾದ ಟಿ.ಎಸ್.ಶ್ರೀವತ್ಸ ಹಾಗೂ ಕೆ.ಹರೀಶ್‌ಗೌಡ ಉದ್ಘಾಟಿಸುವರು. ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಿದ್ದಾರೆ. ಅಸಂಘಟಿತ ಸೇಲ್ಸ್‌ಮನ್‌ಗಳನ್ನು ಒಗ್ಗೂಡಿಸಿ, ಅವರ ಕುಟುಂಬ ಕಲ್ಯಾಣಕ್ಕಾಗಿ ಸವಲತ್ತುಗಳನ್ನು ದೊರಕಿಸಿಕೊಡುವುದು ಸಂಘದ ಸ್ಥಾಪನೆ ಉದ್ದೇಶ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪದಾಧಿಕಾರಿಗಳಾದ ಗುರುಪ್ರಸಾದ್, ಶಿವಕುಮಾರ್, ಶ್ರೀನಿವಾಸ್, ಸತೀಶ್, ಸುನಿಲ್, ನಾರಾಯಣಗೌಡ ಇದ್ದರು.