ಜಿಲ್ಲೆ

ಉತ್ತಮ ಕಾರ್ಯದಿಂದ ಬದುಕು ಸಾರ್ಥಕ : ಮಾಜಿ ಸಚಿವ ಬಿ.ರಮಾನಾಥ ರೈ ಅಭಿಮತ

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ದುರ್ಲಬವಾದ ಮನುಷ್ಯ ಜನ್ಮವನ್ನು ಒಳ್ಳೆಯ ಕಾರ್ಯದ ಮೂಲಕ ಸಾರ್ಥಕಗೊಳಿಸಬೇಕು. ವಿಶ್ವ ಮಾನವರಾಗಿ ಬದುಕುವ ಪ್ರಯತ್ನ ಮಾಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 16ನೇ ವಾಮಂಜೂರು ಶಾಖೆಯನ್ನು ವಾಮಂಜೂರಿನ ಬಾವಾ ಬಿಲ್ಡರ್ ಸ್ಮಾರ್ಟ್‌ಸಿಟಿ ಕಟ್ಟಡದಲ್ಲಿ ಬುಧವಾರ ಉದ್ಘಾಟಿಸಿ ಮಾತನಾಡಿದರು.

ಶಾಸಕ ಡಾ.ವೈ.ಭರತ್ ಶೆಟ್ಟಿ ಭದ್ರತಾಕೋಶ ಉದ್ಘಾಟಿಸಿ, ಕೆಲವು ಸಹಕಾರಿ ಬ್ಯಾಂಕ್‌ಗಳ ಲಾಭಾಂಶ ಕೇವಲ ಪುಸ್ತಕದಲ್ಲಿ ಮಾತ್ರ ದಾಖಲಾಗಿರುತ್ತದೆ. ಅಂತಹ ಸಂಘಗಳಿಗೆ ಹೆಚ್ಚಿನ ಶಾಖೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘ ಲಾಭದ ಜತೆಗೆ ಹೆಚ್ಚಿನ ಶಾಖೆಗಳನ್ನು ಮಾಡಿದೆ. ಇದೊಂದು ಉತ್ತಮ ಕಾರ್ಯ ಎಂದರು.

ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ ನಿರಖು ಠೇವಣಿ ಬಿಡುಗಡೆಗೊಳಿಸಿದರು. ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಉಳಿತಾಯ ಖಾತೆ ಹಸ್ತಾಂತರಿಸಿದರು. ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಕಾರ್ಪೋರೇಟರ್ ಹೇಮಲತಾ ರಘು ಸಾಲ್ಯಾನ್, ಶ್ರೀಕ್ಷೇತ್ರ ಗೆಜ್ಜೆಗಿರಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ದ.ಕ ಜಿಲ್ಲಾ ಮೂರ್ತೆದಾರರ ಮಹಾಮಂಡಲ ನಿರ್ದೇಶಕ ಗಣೇಶ್ ಪೂಜಾರಿ, ವಾಮಂಜೂರು ಇಸ್ಲಾಹುಲ್ ಇಸ್ಲಾಂ ಮದರಸ, ಜುಮಾ ಮಸೀದಿ ಧರ್ಮಗುರು ಅಬ್ದುಲ್ ರಹಿಮಾನ್ ಕೋಯ, ವಾಮಂಜೂರು ಬಿಲ್ಲವ ಸಂಘ ಅಧ್ಯಕ್ಷ ಮಾರಪ್ಪ ಪೂಜಾರಿ, ಮಹಿಳಾ ಸಹಕಾರಿ ಸಂಘ ನಿರ್ದೇಶಕಿ ಜಯಂತಿ, ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲ ನಿರ್ದೇಶಕರಾದ ಪದ್ಮನಾಭ ಕೋಟ್ಯಾನ್, ಶಿವಪ್ಪ ಸುವರ್ಣ, ಉದ್ಯಮಿ ವೀರಣ್ಣ ಎಂ.ಪೂಜಾರಿ, ವಾಮಂಜೂರು ವಿಶ್ವಕರ್ಮ ಸಂಘ ಅಧ್ಯಕ್ಷ ದಿವಾಕರ ಆಚಾರ್ಯ, ನೇತಾಜಿ ಆಟೋ ರಿಕ್ಷಾ ಚಾಲಕ ಮಾಲೀಕ ಸಂಘ ಅಧ್ಯಕ್ಷ ಅಬ್ದುಲ್ ರಜಾಕ್, ಸಂಘ ಉಪಾಧ್ಯಕ್ಷ ವಿಠಲ ಬೆಳ್ಚಾಡ ಉಪಸ್ಥಿತರಿದ್ದರು. ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ ಸ್ವಾಗತಿಸಿದರು. ಅರುಣ್ ಕುಮಾರ್ ಎಂ. ವಂದಿಸಿದರು. ಗಿರೀಶ್‌ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಸುಂದರ ಪೂಜಾರಿ ಬೀಡಿನ ಪಾಲು, ಜಯಶಂಕರ್ ಕಾನ್ಸಲೆ, ಸುಜಾತಾ ಎಂ., ವಾಣಿ ವಸಂತ, ಆಶಿಶ್ ಪೂಜಾರಿ, ಚಿದಾನಂದ ಎಂ.ಕಡೇಶ್ವಾಲ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ., ಸಿಬ್ಬಂದಿ   ಸಹಕರಿಸಿದರು

ಮುಂದಿನ ಶಾಖೆಯನ್ನು ಅಳದಂಗಡಿಯಲ್ಲಿ ಉದ್ಘಾಟಿಸಲು ಯೋಜನೆ ರೂಪಿಸಲಾಗಿದೆ. ಜನರ ಸಹಕಾರದಿಂದ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಲು ಹೊಸ ಹುರುಪು, ಧೈರ್ಯ ಬಂದಿದೆ. ಸಜೀಪಮೂಡದಲ್ಲಿ 50 ಸೆಂಟ್ಸ್ ಜಾಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಪ್ರಧಾನ ಕಚೇರಿ ನಿರ್ಮಾಣವಾಗಲಿದೆ. ಇದಕ್ಕೂ ಮುಂಚಿತವಾಗಿ ಸಂಘದ 25 ಶಾಖೆ ಮಾಡಿ 100 ಮಂದಿ ಮಹಿಳೆಯರಿಗೆ ಉದ್ಯೋಗ ಕೊಡಿಸಿ ರಾಜ್ಯದಲ್ಲೇ ಮಾದರಿ ಸಂಘಟನೆಯನ್ನಾಗಿ ರೂಪಿಸಬೇಕು. ಕೆ.ಸಂಜೀವ ಪೂಜಾರಿ ಸಂಘ ಅಧ್ಯಕ್ಷ