ಜಿಲ್ಲೆ

ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಗಂಡು- ಹೆಣ್ಣೆಂಬ ಭೇದ ಮಾಡಬಾರದು. ಮಕ್ಕಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಅಧ್ಯಕ್ಷ ರಾಘವೇಂದ್ರ ತವನಪ್ಪನವರ ಹೇಳಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಅಂಗಸ೦ಸ್ಥೆಯಾದ ರಾಜೀವ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಸತ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಭಾ ಕಾರ್ಯದರ್ಶಿ ರಾಧಾಕೃಷ್ಣನ್ ಮಕ್ಕಳು ರಾಜಕೀಯ ಜ್ಞಾನ ಹೊಂದಿರಬೇಕು. ಚೆನ್ನಾಗಿ ಓದಿ ಅಂಕ ಗಳಿಸಿ ಶಾಲೆಗೆ ಕೀರ್ತಿ ತರಬೇಕು ಎಂದರು.
ಮುಖ್ಯಾಧ್ಯಾಪಕಿ ವೀಣಾ ತುಪ್ಪದ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಜಿ.ಜಿ. ಹಿರೇಮಠ, ಶ್ರೀಶೈಲ ಎಕ್ಕುಂಡಿಮಠ, ಉಮಾ ಚವಾಣ್, ಸುಧಾ ಕಾಳೆ, ವಿಜಯಲಕ್ಷ್ಮಿ ಕುಲಕರ್ಣಿ, ವಿಶಾಲಾಕ್ಷಿ ಕುಂದಗೋಳ, ಇತರರಿದ್ದರು. ಪೂಜಾ ಕುಬಸದ ವಂದಿಸಿದರು.