ಬಾಗಲಕೋಟೆ:ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ವಲಯಗಳನ್ನು ಒಳಗೊಂಡಂತೆ ಸಮಗ್ರ ಕೃಷಿಯ ಅಭಿವೃದ್ಧಿಯು ಪ್ರಧಾನಮಂತ್ರಿ ಧನ್&ಧಾನ್ಯ ಕೃಷಿ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ತಿಳಿಸಿದರು.
ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವಾಲಯದಿಂದ ಹಮ್ಮಿಕೊಂಡಿದ್ದ 2025ನೇ ಸಾಲಿನ ಪ್ರಧಾನ ಮಂತ್ರಿ ಧನ್&ಧಾನ್ಯ ಕೃಷಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸದ ನೇರ ಪ್ರಸಾರದಲ್ಲಿ ಭಾಗವಹಿಸಿ ಪ್ರಧಾನ ಮಂತ್ರಿಗಳು ಮಾತನಾಡಿದರು.
ಕೃಷಿ ಮೂಲ ಸೌಕರ್ಯ ಯೋಜನೆಯಲ್ಲಿ ರೈತರ ಉತ್ಪಾದನಾ ವ್ಯವಸ್ಥೆಗೆ ಅಗತ್ಯವಾದ ಗೋದಾಮು, ಸಂಸ್ಕರಣಾ ಟಕಗಳು ಮತ್ತು ಮಾರುಕಟ್ಟೆ ಮೂಲ ಸೌಕರ್ಯ ನಿರ್ಮಿಸಲು ಸಾಲ ಸೌಲಭ್ಯ ಒದಗಿಸುವ ಗುರಿ ಹೊಂದಿದೆ. ಈ ನಿ-ಧಿಯಡಿ ಪ್ರಾರಂಭವಾಗುವ 2100 ಕ್ಕೂ ಹೆಚ್ಚು ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿ ಕೃಷಿಯ ಮೌಲ್ಯ ಬಲಪಡಿಸುತ್ತವೆ ಎಂದರು.
ಕೃಷಿ ೇತ್ರದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಿ, ರೈತರಿಗೆ ಆರ್ಥಿಕ ಬಲ, ಉತ್ಪಾದಕತೆ, ಸಂಗ್ರಹಣಾ ಸೌಲಭ್ಯ ಮತ್ತು ಮಾರುಕಟ್ಟೆ ಸಂಪರ್ಕವನ್ನು ಬಲಪಡಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.ಬಾಗಲಕೋಟೆಯಲ್ಲಿ ಇದರ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಆಧುನಿಕ ವಿಜ್ಞಾನ ಆಧಾರಿತ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆಯನ್ನು ರೈತರಿಗೆ ತಿಳಿಸಿ, ನವೀನ ಕೃಷಿ ವಿಧಾನಗಳನ್ನು ಅನುಸರಿಸುವ ಮೂಲಕ ಉತ್ಪಾದನೆ ಹಾಗೂ ಆದಾಯ ಹೆಚ್ಚಿಸಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯ ಮಹಾಂತೇಶ ಹಟ್ಟಿ, ಜಂಟಿ ಕೃಷಿ ನಿರ್ದೇಶಕ ಲಕ್ಷ$್ಮಣ ಕಳ್ಳೆಣ್ಣನವರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಗುರುದತ್ತ ಹೆಗಡೆ, ಡಾ. ವೆಂಕಣ್ಣ ಬಳಗಾನೂರ, ಡಾ. ಭವ್ಯ ಎಂ. ಆರ್, ಡಾ. ರಮಿತಾ ಬಿ.ಇ, ಡಾ. ಸಿದ್ದಪ್ಪ ಅಂಗಡಿ, ಡಾ. ಬಸವರಾಜ ನಾಗಲೀಕರ ಇತರರಿದ್ದರು.
150ಕ್ಕೂ ಹೆಚ್ಚು ರೈತರು ಕೇಂದ್ರದಲ್ಲಿ ನೇರ ಪ್ರಸಾರ ವೀಸಿದರು. 500ಕ್ಕೂ ಹೆಚ್ಚು ರೈತರು ಮತ್ತು ರೈತ ಮಹಿಳೆಯರು ವಾಟ್ಸಪ್ ಲಿಂಕ್ಗಳ ಮೂಲಕ ಆನ್ಲೈನ್ನಲ್ಲಿ ಪ್ರಧಾನಮಂತ್ರಿಗಳ ಕಾರ್ಯಕ್ರಮ ವೀಸಿದರು.
ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಧನ್&ಧಾನ್ಯ ಕೃಷಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ರೈತರಿಗೆ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಕಿಟ್ ವಿತರಿಸಿದರು. ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ ಮತ್ತು ಅಧಿಕಾರಿಗಳು ಇದ್ದರು.