ಬಿ.ವೈ.ರಾಘವೇಂದ್ರ ಅವರ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾರದಾ ಪೂರ‌್ಯಾನಾಯ್ಕಾ, ಕೆ.ಬಿ.ಪ್ರಸನ್ನಕುಮಾರ್, ಕಡಿದಾಳ್ ಗೋಪಾಲ್, ದೀಪಕ್ ಸಿಂಗ್, ಕಾಂತರಾಜ್, ರಾಮಕೃಷ್ಣ ಮತ್ತಿತರು ಶುಭಕೋರಿದರು. ತೇಜಸ್ವಿನಿ ರಾಘವೇಂದ್ರ ಇತರರಿದ್ದರು.  
ಜಿಲ್ಲೆ

ಸಂಸದ ಬಿವೈಆರ್ ನವೀಕೃತ ಕಚೇರಿ ಉದ್ಘಾಟನೆ

ಶಿವಮೊಗ್ಗ: ಉಪವಿಭಾಗಾಧಿಕಾರಿ ಕಚೇರಿ ಕಟ್ಟಡದಲ್ಲಿದ್ದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಕಚೇರಿ ನವೀಕೃತಗೊಂಡಿದ್ದು, ಮಂಗಳವಾರ ಪತ್ನಿ ತೇಜಸ್ವಿನಿ ಅವರೊಂದಿಗೆ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಕಚೇರಿಯನ್ನು ನವೀಕರಿಸುವುದು ಮುಖ್ಯವಲ್ಲ. ಕ್ಷೇತ್ರದ ಜನರ ಸಮಸ್ಯೆಗೆ ಈ ಕಚೇರಿಯಲ್ಲಿ ಶೀಘ್ರ ಹಾಗೂ ಸೂಕ್ತ ಪರಿಹಾರ ಸಿಗಬೇಕೆಂಬುದು ನನ್ನ ಆಶಯ. ಅಭಿವೃದ್ಧಿ ವಿಷಯದಲ್ಲಿ ನನ್ನ ಕಚೇರಿ ಸದಾ ಮುಂದಿರಲಿದೆ ಎಂದು ಭರವಸೆ ನೀಡಿದರು.

ಮೂಲ ಸೌಕರ್ಯ, ಸಂಪರ್ಕ ಸೇರಿ ಹಲವು ಆಯಾಮಗಳಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿಯಿದೆ. ಇನ್ನೂ ಅನೇಕ ಕೆಲಸಗಳು ಆಗಬೇಕು. ಜನರಿಗಾಗಿ ಕೆಲಸ ಮಾಡುವ ತುಡಿತ ಸದಾ ನನ್ನಲ್ಲಿ ಇರಲಿದೆ. ಕಚೇರಿಗೆ ಬರುವ ಎಲ್ಲರಿಗೂ ಪರಿಹಾರ ಸಿಗುವಂತಾಗಬೇಕು ಎಂದು ಹೇಳಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ, ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ಪ್ರಮುಖರಾದ ಬಳ್ಳೇಕೆರೆ ಸಂತೋಷ್, ಪದ್ಮಿನಿ, ಸುಮಾ, ಮಾಲತೇಶ್, ಎಸ್.ದತ್ತಾತ್ರಿ, ಜೆಡಿಎಸ್ ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಪ್ರಮುಖರಾದ ರಾಮಕೃಷ್ಣ, ದೀಪಕ್ ಸಿಂಗ್ ಇದ್ದರು.