ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಕಾವೇರಿ ವಲಯ 2 ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ಕದ್ರಿಯ ಅಶೋಕ ಸೇವಾ ಭವನದಲ್ಲಿ ನಡೆಯಿತು. 
ಜಿಲ್ಲೆ

ಲಯನ್ಸ್ ಮತ್ತು ಲಿಯೋ ಕ್ಲಬ್ ಕಾವೇರಿ ವಲಯ 2ರ ನೂತನ ಪದಾಧಿಕಾರಿಗಳ ಪದಗ್ರಹಣ

ಮಂಗಳೂರು: ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಕಾವೇರಿ ವಲಯ 2 ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ಕದ್ರಿಯ ಅಶೋಕ ಸೇವಾ ಭವನದಲ್ಲಿ ನಡೆಯಿತು.

ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಅಲ್ವಿನ್ ಪ್ಯಾಟ್ರಿಕ್ ಪತ್ರಾವೊ, ಪ್ರಭಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

ನೂತನ ಅಧ್ಯಕ್ಷರಾಗಿ ಡಾ.ಸಾವಿತ್ರಿ ಸದಾನಂದ್, ಕಾರ್ಯದರ್ಶಿಯಾಗಿ ಶಾಂತಾ ಶೆಟ್ಟಿ, ಕೋಶಾಧಿಕಾರಿಯಾಗಿ ಡಾ.ಅನಿಶಾ ನಿಶಾಂತ್ ನೇಮಕಗೊಂಡರು. ಲಿಯೋ ಆಂಡ್ರಿಯಾ ಪರ್ಲ್ ಡಿಸೋಜ ಅವರು ಸ್ವೀಕಾರ ಭಾಷಣ ಮಾಡಿದರು. ಸಮಾರಂಭದಲ್ಲಿ ಕ್ಲಬ್ ವತಿಯಿಂದ ಯೋಜಿಸಲಾದ ವಿವಿಧ ಸೇವಾ ಚಟುವಟಿಕೆಗಳನ್ನು ಕಾರ್ಯದರ್ಶಿ ಶಾಂತಾ ಶೆಟ್ಟಿ ಪ್ರಸ್ತುತಪಡಿಸಿದರು. ಮಾಜಿ ಅಧ್ಯಕ್ಷೆ ಲಯನ್ ಉಷಾ ಪ್ರಭಾಕರ್ ಸ್ವಾಗತಿಸಿ ವಂದಿಸಿದರು.