ಬೆಳ್ತಂಗಡಿ: ಎಂ.ಸಿ.ಸಿ. ಬ್ಯಾಂಕ್‌ನ 18ನೇ ಶಾಖೆಯನ್ನು ಬೆಳ್ತಂಗಡಿಯಲ್ಲಿ ಭಾನುವಾರ ಎಂ.ಸಿ.ಸಿ. ಬ್ಯಾಂಕ್‌ನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ಉದ್ಘಾಟಿಸಿದರು. ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನ ಧರ್ಮಗುರು ವಾಲ್ಟರ್ ಡಿಮೆಲ್ಲೋ ದೀಪ ಪ್ರಜ್ವಲನೆ ಮಾಡಿದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರೋಕ್ಯುರೇಟರ್ ಅಬ್ರಹಾಂ ಪಟ್ಟೆರಿಲ್ ಭದ್ರತಾ ಕೊಠಡಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಹೆನ್ರಿ ಲೋಬೊ, ಬೆಳ್ತಂಗಡಿ ಸಿರಿಯನ್ ಕೆಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಎ.ಜೆ, ಎಂ.ಸಿ.ಸಿ. ಬ್ಯಾಂಕ್‌ನ ಉಪಾಧ್ಯಕ್ಷ ಜೆರಾಲ್ಡ್ ಜೆ.ಡಿಸಿಲ್ವಾ, ಬೆಳ್ತಂಗಡಿ ಶಾಖೆಯ ಸಿಬ್ಬಂದಿ ಶರಣ್ ಪಿಂಟೋ, ಸಮಾಜ ಸೇವಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ ಉಪಸ್ಥಿತರಿದ್ದರು. ಎಂ.ಸಿ.ಸಿ. ಬ್ಯಾಂಕ್‌ನ ನಿರ್ದೇಶಕ ವಿನ್ಸೆಂಟ್ ಲಸ್ರಾದೊ ಸ್ವಾಗತಿಸಿದರು.
ಸಮಾಜಸೇವೆ ಹಾಗೂ ಸಾಧಕರಿಗೆ ಸನ್ಮಾನ
ಚಾರ್ಮಾಡಿ ಹಸನಬ್ಬ, ಡಾ.ವೇಣುಗೋಪಾಲ ಶರ್ಮ, ಕಾಸ್ಮೀರ್ ವಿನೇಜಸ್, ಸಬಿತಾ ಮೊನಿಸ್ ಅವರನ್ನು ಸನ್ಮಾನಿಸಲಾಯಿತು. ಸಿಯೋನ್ ಆಶ್ರಮ ಟ್ರಸ್ಟ್ ಮತ್ತು ಬದ್ಯಾರ್ ಎಲ್.ಎಂ.ಪಿಂಟೋ ಆಸ್ಪತ್ರೆಗೆ ಸಹಾಯಧನದ ಚೆಕ್ ಹಸ್ತಾಂತರ ಮಾಡಲಾಯಿತು. ಕಟ್ಟಡ ಮಾಲೀಕ, ವೈಭವ್ ಆರ್ಕೇಡ್ ಮಾಲೀಕ ಸೀತಾರಾಮ ಶೆಟ್ಟಿ ಹಾಗೂ ಬ್ಯಾಂಕ್‌ನ ಶಾಖೆ ವಿನ್ಯಾಸ ಮಾಡಿಕೊಟ್ಟ ಇಂಜಿನಿಯರ್ ಕಾರ್ತಿಕ್ ಅವರನ್ನು ಗೌರವಿಸಲಾಯಿತು. ಬೆಳ್ತಂಗಡಿ ಸುತ್ತಮುತ್ತ ಇರುವ ಚರ್ಚ್‌ನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು.
18 ಕಡೆ ಸೇವೆ
ಪ್ರಸ್ತುತ ಎಂ.ಸಿ.ಸಿ. ಬ್ಯಾಂಕ್ ಸುಸಜ್ಜಿತ ಆಡಳಿತ ಕಚೇರಿ ಮತ್ತು ಸಂಸ್ಥಾಪಕರ ಶಾಖೆ, ಅಶೋಕನಗರ, ಕಂಕನಾಡಿ, ಕುಲಶೇಖರ, ಮೋರ್ಗನ್ಸ್ ಗೇಟ್, ಮೂಡುಬಿದ್ರಿ, ಶಿರ್ವ, ಬಜಪೆ, ಕಿನ್ನಿಗೋಳಿ, ಸುರತ್ಕಲ್, ಉಳ್ಳಾಲ, ಉಡುಪಿ, ಕುಂದಾಪುರ, ಪುತ್ತೂರು, ಬಿ.ಸಿ.ರೋಡ್, ಕಾರ್ಕಳ ಮತ್ತು ಬ್ರಹ್ಮಾವರ ಸೇರಿದಂತೆ 17 ಶಾಖೆಗಳನ್ನು ಹೊಂದಿರುವ ಎಂ.ಸಿ.ಸಿ. ಬ್ಯಾಂಕ್ ತನ್ನ 18ನೇ ಶಾಖೆಯನ್ನು ಬೆಳ್ತಂಗಡಿಯಲ್ಲಿ ಆರಂಭಿಸಿದೆ.