ಹುಮನಾಬಾದ್‌ನ ಶಕುಂತಲಾ ಪಾಟೀಲ್ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಸುಭಾಷ ಪೂಜಾರಿ ಮಾತನಾಡಿದರು. ಡಿವೈಎಸ್‌ಪಿ ಜೆ.ಎಸ್.ನ್ಯಾಮಗೌಡರ್, ಲಕ್ಷ್ಮೀ ಮೇತ್ರಿ, ಡಾ.ವಿನಾಯಕರಾವ, ಸುಭಾಷ ಪೂಜಾರಿ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳೇ ದುಶ್ಚಟದಿಂದ ದೂರವಿರಿ

ಹುಮನಾಬಾದ್: ವಿದ್ಯಾರ್ಥಿಗಳು ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ದುಶ್ಚಟ, ದುರಭ್ಯಾಸದಿಂದ ದೂರವಿರಬೇಕೆಂದು ಡಿವೈಎಸ್‌ಪಿ ಜೆ.ಎಸ್.ನ್ಯಾಮಗೌಡರ್ ಹೇಳಿದರು.

ಪಟ್ಟಣದ ಎಚ್‌ಕೆಡಿಇ ಟ್ರಸ್ಟ್ನ ಅಡಿಯಲ್ಲಿರುವ ಶಕುಂತಲಾ ಪಾಟೀಲ್ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉನ್ನತ ಹುದ್ದೆ ಪಡೆದುಕೊಳ್ಳಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಓದಿನ ಕಡೆಗೆ ಹೆಚ್ಚಿನ ಗಮನ ನೀಡಬೇಕು. ತಂದೆ-ತಾಯಿ ಋಣ ತೀರಿಸುವ ನಿಟ್ಟಿನಲ್ಲಿ ಗುರು-ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು ಎಂದು ಹೇಳಿದರು.

ದುರ್ದೈವದ ಸಂಗತಿ ಎಂದರೆ ಹದಿಹರೆಯದ ವಿದ್ಯಾರ್ಥಿಗಳು ಪ್ರೀತಿ ಪ್ರೇಮದಲ್ಲಿ ಸಿಲುಕಿ ನರಳಾಡಿ ಕೊನೆಗೆ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿರುವುದಕ್ಕೆ ಪರೋಕ್ಷವಾಗಿ ಪಾಲಕರು ಕಾರಣರೆಂದು ವಿಷಾದ ವ್ಯಕ್ತಪಡಿಸಿ, ವಿದ್ಯಾರ್ಥಿಗಳ ಬದುಕು ಮೊಬೈಲ್ ಮತ್ತು ದ್ವಿಚಕ್ರ ವಾಹನಗಳಿಂದ ಹಾಳಾಗುತ್ತಿದೆ. ಉಪನ್ಯಾಸಕರು ಮತ್ತು ಪಾಲಕರು ಇದನ್ನು ತಪ್ಪಿಸಬೇಕೆಂದು ಕಿವಿಮಾತು ಹೇಳಿದರು.

ವಿಶೇಷವಾಗಿ ವಿಜಯಪುರದ ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮಿಗಳು ಈ ಶಕುಂತಲಾ ಪಾಟೀಲ್ ಶಿಕ್ಷಣ ಸಂಸ್ಥೆಗೆ ಪಾದ ಸ್ಪರ್ಶ ಮಾಡಿದ್ದರಿಂದ ಇಷ್ಟು ಬೃಹತ್ ಪ್ರಮಾಣದಲ್ಲಿ ಈ ಸಂಸ್ಥೆ ಬೆಳೆದಿದೆ. ಇದು ಅತ್ಯಂತ ಹರ್ಷದಾಯಕ ಸಂಗತಿ ಎಂದರು.

ರಾಷ್ಟçಪತಿ ಪ್ರಶಸ್ತಿ ವಿಜೇತ ಲಕ್ಷ್ಮೀ ಮೇತ್ರಿ ಮಾತನಾಡಿದರು. ಪ್ರಾಚಾರ್ಯ ಡಾ.ವಿನಾಯಕರಾವ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಆಡಳಿತಾಧಿಕಾರಿ ಸುಭಾಷ ಪೂಜಾರಿ, ಉಪನ್ಯಾಸಕ ರಂಜಿತ ಕಟ್ಟಿಮನಿ, ವಿಕ್ರಂ ಡೋಲೆ, ಜಯಂತ ಕಶ್ಯಪ್, ಮಹ್ಮದ್ ಇಬ್ರಾಹಿಂ ಶೇಕ್ ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.