ಕೆ.ಆರ್.ಸಾಗರ: ಇಲ್ಲಿನ ಪ್ರಾಥಮಿಕ ಆರೋಗ್ಯ ಕ್ಷೇಮ ಕೇಂದ್ರದಲ್ಲಿ ಶನಿವಾರ ತಾಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್ ಅವರು ಲಾರ್ವಹಾರಿ ಮೀನು ಸಾಗಣಿಕೆ ತೊಟ್ಟಿಗೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮೀನು ಸಾಗಣಿಕೆ ತೊಟ್ಟಿಗಳನ್ನು ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ತೊಟ್ಟಿಯಲ್ಲಿ ಗಪ್ಪಿ ಮೀನು ಬಿಡಲಾಗುತ್ತದೆ. ಈ ರೀತಿಯ ಮೀನಿಗಳು ಮಲೇರಿಯಾ, ಚಿಕೂನ್ ಗುನ್ಯಾ, ಡೆಂೆ ಹರಡುವ ಸೊಳ್ಳೆಗಳನ್ನು ತಿನ್ನುತ್ತದೆ. ಇದರಿಂದ ರೋಗ ಹರಡವುದು ತಡೆಗಟ್ಟಲು ಸಾಧ್ಯವಾಗುತ್ತದೆ. ಈ ಮೀನುಗಳನ್ನು ಶುದ್ಧವಾದ ನೀರಿನಲ್ಲಿ ಮಾತ್ರ ಬಿಡಬೇಕು, ಇದು ಒಂದು ಆರೋಗ್ಯ ಪ್ರಚಾರದ ಒಂದು ಭಾಗವಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆ.ಆರ್.ಸಾಗರ ಆರೋಗ್ಯ ಕ್ಷೇಮ ಕೇಂದ್ರದ ವೈದ್ಯ ಡಾ.ಪ್ರಪುಲ್ಲಾ, ಕೆ.ಆರ್.ಸಾಗರ ಗ್ರಾಪಂ ಅಧ್ಯಕ್ಷೆ ಶೃತಿ ಶ್ರೀನಿವಾಸ, ಉಪಾಧ್ಯಕ್ಷ ರವಿಶಂಕರೇಗೌಡ, ಆಯಿಷ್ ವೈದ್ಯಾಧಿಕಾರಿ ಸುದೀಪ್, ಹಿರಿಯ ಆರೋಗ್ಯ ಸಹಾಯಕಿ ಸೌಮ್ಯಾ, ಲ್ಯಾಬ್ ಟೆಕ್ನಿಷಿಯನ್ ಪ್ರಕಾಶ್ ಮತ್ತು ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.