ಕೆಸರು ಗದ್ದೆಗೆ ಹಾಲೆರೆದು, ಮಕ್ಕಳತ್ತ ಬಾಲ್​ ಎಸೆಯುವ ಮೂಲಕ ಕೆಸರ್ದಗೊಬ್ಬು ಸ್ಪರ್ಧೆಗೆ ಡಾ. ನಿ.ಬೀ. ವಿಜಯ ಬಲ್ಲಾಳ್​ ಚಾಲನೆ ನೀಡಿದರು. ಶಿವಕುಮಾರ್​ ಅಂಬಲಪಾಡಿ, ಸೋಮನಾಥ್​ ಬಿ.ಕೆ., ವಿಶ್ವನಾಥ್​ ಹೆಗ್ಡೆ, ಸುಜಾತಾ ಶೆಟ್ಟಿ, ಹರೀಶ್​ ಶೆಟ್ಟಿ, ಕೀರ್ತಿ ಶೆಟ್ಟಿ, ಸೀತಾರಾಮ ಶೆಟ್ಟಿ ಇತರರಿದ್ದರು. 
ಜಿಲ್ಲೆ

ಗ್ರಾಮೀಣ ಸೊಗಡು, ಪರಂಪರೆಯ ಪ್ರತೀಕ

ಡಾ. ನಿ.ಬೀ. ವಿಜಯ ಬಲ್ಲಾಳ್​ ಅನಿಸಿಕೆ | ಕೆಸರ್ದ ಗೊಬ್ಬು ಕ್ರೀಡೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಕೆಸರು ಗದ್ದೆಯು ನಮ್ಮ ಮಣ್ಣಿನ ಹಾಗೂ ರೈತರ ಬದುಕಿನ ಸಂಕೇತವಾಗಿದೆ. ಕೃಷಿ ಚಟುವಟಿಕೆಗೆ ಉತ್ತೇಜನ ನೀಡುವ ಕೆಸರು ಗದ್ದೆ ಕ್ರೀಡಾಕೂಟವು ಗ್ರಾಮೀಣ ಸೊಗಡು, ಸಂಸ್ಕೃತಿ ಮತ್ತು ಭವ್ಯ ಪರಂಪರೆಯ ಪ್ರತೀಕವಾಗಿದೆ ಎಂದು ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್​ ಅಭಿಪ್ರಾಯಪಟ್ಟರು.

ಅಂಬಲಪಾಡಿಯ ಬೀಡು ಮಾರ್ಗ ಸೀತಾರಾಮ ಶೆಟ್ಟಿ ಅವರ ಗದ್ದೆಯಲ್ಲಿ ಯುವಕ ಮಂಡಲ (ರಿ.), ಹಿರಿಯರ ವೇದಿಕೆ ಅಂಬಲಪಾಡಿ ಆಶ್ರಯದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟ ಕೆಸರ್ದ ಗೊಬ್ಬು ಕ್ರೀಡಾಕೂಟ ಉದ್ಘಾಟಿಸಿ, ಮಾತನಾಡಿದರು.

ಅವಿಸ್ಮರಣೀಯ ಕ್ಷಣ

ಮನುಷ್ಯನಿಗೂ ಮಣ್ಣಿಗೂ ಅವಿನಾಭಾವ ಸಂಬಂಧವಿದ್ದು, ಪಂಚಭೂತಗಳಲ್ಲಿ ವಿಶಿಷ್ಟವಾದುದಾಗಿದೆ. ಇಂತಹ ಕೆಸರಿನಲ್ಲಿ ರೋಗ ನಿರೋಧಕ ಶಕ್ತಿ ಇದ್ದು ಆಟವಾಡಿದರೆ ಶೀತ, ನೆಗಡಿ, ಜ್ವರ ಬರುವುದಿಲ್ಲ. ಶ್ರಮದ ಬದುಕಿನ ಸಂಕೇತವಾದ ಈ ಕೆಸರ್ದ ಗೊಬ್ಬು ಕ್ರೀಡೆಯು ಎಲ್ಲರೂ ಆತ್ಮೀಯರಾಗಿ ಒಂದೆಡೆ ಸೇರುವ ಅವಿಸ್ಮರಣೀಯ ಕ್ಷಣವಾಗಿದೆ. ಕೆಸರಿನಲ್ಲಿ ನಿರ್ಮಲವಾಗಿ ಅರಳುವ ತಾವರೆಯಂತೆ ನಾವುಗಳೂ ಬದುಕಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಯುವಕ ಮಂಡಳ ಅಧ್ಯಕ್ಷ ಹರೀಶ್​ ಆಚಾರ್ಯ, ಅಂಬಲಪಾಡಿ ಗ್ರಾಪಂ ಸದಸ್ಯ ಸೋಮನಾಥ್​ ಬಿ.ಕೆ., ಉದ್ಯಮಿ ವಿಶ್ವನಾಥ್​ ಹೆಗ್ಡೆ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಸುಜಾತಾ ಶೆಟ್ಟಿ, ನಗರಸಭಾ ಸದಸ್ಯ ಹರೀಶ್​ ಶೆಟ್ಟಿ, ಯುವಕ ಮಂಡಲ ಹಿರಿಯರ ವೇದಿಕೆಯ ಗೌರವಾಧ್ಯಕ್ಷ ಕೀರ್ತಿ ಶೆಟ್ಟಿ, ಗದ್ದೆಯ ಮಾಲಕ ಸೀತಾರಾಮ ಶೆಟ್ಟಿ, ಭರತ್​ ರಾಜ್​ ಕೆ.ಎನ್​., ಜಗದೀಶ್​ ಆಚಾರ್ಯ ಕಪ್ಪೆಟ್ಟು, ರಾಜೇಶ್​ ಸುವರ್ಣ, ಭಾರತಿ ಭಾಸ್ಕರ್​, ಲಕ್ಷ್ಮಣ ಪೂಜಾರಿ, ಕುಸುಮಾ ಕಿಶೋರ್​, ಹರೀಶ್​ ಪಾಲನ್​, ಸುನೀಲ್​ ಕುಮಾರ್​ ಕಪ್ಪೆಟ್ಟು, ಯೋಗೀಶ್​ ಶೆಟ್ಟಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವಿವಿಧ ವಿಭಾಗಗಳಲ್ಲಿ ವಿಜೇತಾರದ ಸ್ಪರ್ಧಾಳುಗಳಿಗೆ ಬಹುಮಾನ ನೀಡಲಾಯಿತು. ಯೋಗೀಶ್​ ಕೊಳಲಗಿರಿ, ಪ್ರಶಾಂತ್​ ಕೆ.ಎಸ್​. ಮತ್ತು ಅಜಿತ್​ ಕಪ್ಪೆಟ್ಟು ಕಾರ್ಯಕ್ರಮ ನಿರೂಪಿಸಿದರು. ನಚಿಕೇತ್​ ಶೆಟ್ಟಿಗಾರ್​ ವಂದಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಆಷಾಢ ಮಾಸದ ಕಷ್ಟದ ಬದುಕು ಮತ್ತು ಆಚರಣೆಗಳ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಸರ್ದ ಗೊಬ್ಬು ಕಾರ್ಯಕ್ರಮ ಸಕಾಲಿಕ ಮತ್ತು ಪ್ರಶಂಸನೀಯ. | ಶಿವಕುಮಾರ್​ ಅಂಬಲಪಾಡಿ. ಅಧ್ಯಕ್ಷ, ಬಿಲ್ಲವ ಸೇವಾ ಸಂಘ