ರಾಮದುರ್ಗ: ಜೆಸಿಐ ರಾಮದುರ್ಗ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.12ರಂದು ಸಂಜೆ 6.30ಕ್ಕೆ ಮರಾಠಾ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ತುಕಾರಾಮ ಪಮ್ಮಾರ ಹೇಳಿದರು.
ಪಟ್ಟಣದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಬೆಳಗಾವಿ ಅಂಚೆ ವಿಭಾಗದ ಅಧೀಕ್ಷಕ ವಿಜಯ ವಾದೋನಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಜೆಸಿಐ ರಾಷ್ಟ್ರೀಯ ಆಡಳಿತ ಮಂಡಳಿ ಸಂಯೋಜಕಿ ಸವಿತಾ ರಮೇಶ ಪಾಲ್ಗೊಳ್ಳಲಿದ್ದಾರೆ.
ನೂತನ ಅಧ್ಯಕ್ಷ ತುಕಾರಾಮ ಪಮ್ಮಾರ ಅಧ್ಯಕ್ಷತೆ ವಹಿಸಲಿದ್ದು, ನೂತನ ಪದಾಧಿಕಾರಿಗಳಿಗೆ ಜೆಸಿಐ ವಲಯ 24 ವಲಯಾಧ್ಯಕ್ಷ ಚನ್ನವಿರೇಶ ಎಚ್. ಹಾಗೂ ಸದಸ್ಯರಿಗೆ ಜೆಸಿಐ ವಲಯ 24 ಉಪಾಧ್ಯಕ್ಷ ರವಿಕುಮಾರ ಡಿ. ಪ್ರಮಾಣ ವಚನ ಬೋಧನೆ ಮಾಡಲಿದ್ದಾರೆ. ಸಮಾರಂಭದಲ್ಲಿ ಪಟ್ಟಣದ ಜನತೆ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ನಿಕಟಪೂರ್ವ ಕಾರ್ಯದರ್ಶಿ ಶಿವು ಗೊರವನಕೊಳ್ಳ, ಸಂಸ್ಥೆಯ ಖಜಾಂಚಿ ಮಧುಸೂಧನ ಮಾಳದಕರ ಇತರರಿದ್ದರು.