ಅರಸೀಕೆರೆ ಗ್ರಾಮಾಂತರ
ತಾಲೂಕಿನ ಕಣಕಟ್ಟೆ ಹೋಬಳಿಯ ದೊಡ್ಡ ಮೇಟಿಕುರ್ಕೆ (ಡಿ.ಎಂ.ಕುರ್ಕೆ) ಗ್ರಾಮದ ಜಾಮಿಯಾ ಮಸೀದಿಯನ್ನು ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಶಿವಲಿಂಗೇಗೌಡ ಇತ್ತೀಚೆಗೆ ಉದ್ಘಾಟಿಸಿದರು.
ನಂತರ ಮಾತನಾಡಿ, ಎಲ್ಲ ಸಮಾಜದವರನ್ನು ಒಗ್ಗೂಡಿಸಿಕೊಂಡು ಅವರ ಕಷ್ಟ, ದುಃಖಗಳಿಗೆ ಸ್ಪಂದಿಸಿ ಕೊಂಡು ಹೋಗುವುದೇ ಧರ್ಮದ ಸಾರ. ಎಲ್ಲ ಸಮಾಜ ಬಾಂಧವರು ಸಹನೆ, ಶಾಂತಿ, ಸಹಬಾಳ್ವೆಯಿಂದ ಬಾಳುವಂತೆ ಅಲ್ಲಾಹನಲ್ಲಿ ನಾನು ಪ್ರಾರ್ಥಿಸುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದಿಂದ ಇನ್ನೂ ಹಲವು ಯೋಜನೆಗಳಿಗೆ ಅನುದಾನಗಳನ್ನು ತರುವ ಮೂಲಕ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿಪಡಿಸಲಾಗುವುದು ಎಂದರು.
ನಗರಸಭೆ ಸದಸ್ಯ ಎಂ. ಸಮಿವುಲ್ಲ ಮಾತನಾಡಿ, ಶಾಸಕ ಶಿವಲಿಂಗೇಗೌಡ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರ ಸಹಕಾರದಿಂದ ಮಸೀದಿ ನಿರ್ಮಾಣವಾಗಿದೆ. ಇದು ಸಂತೊಷದ ವಿಷಯ ಎಂದು ಹೇಳಿದರು. ಸುನ್ನಿ ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ವೌಲಾನಾ ರಿಜ್ವಾನ್ ಖಾದ್ರಿ ರವರಿಂದ ಕುರಾನ್ ಪಠಣ ನಡೆಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾಡಾಳು ಸ್ವಾಮಿ, ಚನ್ನಬಸವ, ಸುರೇಶ್, ಗೌರೇಶ್ ಸಸಿವಾಳ, ಅನಿಲ್ ಹಾಗೂ ಮೇಟಿಕುರ್ಕೆ ಜಾಮಿಯಾ ಮಸೀದಿಯ ಅಧ್ಯಕ್ಷರಾದ ನೂರುಲ್ಲಾ , ಕಾರ್ಯದರ್ಶಿಗಳಾದ ಶಹಾನವಾಜ್, ಅತ್ಿ, ಮಹಮ್ಮದ್ ಶಫಿ ಇತರರು ಇದ್ದರು.