ಕೋಟ ವಿವೇಕ ವಿದ್ಯಾ ಸಂಸ್ಥೆಯಲ್ಲಿ ಇಂಟರ‌್ಯಾಕ್ಟ್ ಕ್ಲಬ್ ಪದಪ್ರದಾನ ಇತ್ತೀಚಿಗೆ ನಡೆಯಿತು 
ಜಿಲ್ಲೆ

ಸಾಲಿಗ್ರಾಮದಲ್ಲಿ ಇಂಟರ‌್ಯಾಕ್ಟ್ ಕ್ಲಬ್‌ಗಳ ಪದಪ್ರದಾನ

ಇಂದಿರಾ ಎನ್ ಕೆ

ಕೋಟ: ಕೋಟ ಸಾಲಿಗ್ರಾಮ ರೋಟರಿ ಕ್ಲಬ್‌ನ ನಾಲ್ಕು ಇಂಟರ‌್ಯಾಕ್ಟ್ ಕ್ಲಬ್‌ಗಳ ಪದಪ್ರದಾನ ಇತ್ತೀಚೆಗೆ ವಿವೇಕ ವಿದ್ಯಾ ಸಂಸ್ಥೆ ಸಭಾಂಗಣದಲ್ಲಿ ನೇರವೇರಿತು. ರೋಟರಿ ಕ್ಲಬ್ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಅಧ್ಯಕ್ಷತೆ ವಹಿಸಿ ಪದಪ್ರದಾನ ನೆರವೇರಿಸಿದರು. ವಿವೇಕ ಜೂನಿಯರ್ ಕಾಲೇಜು ಇಂಟರ‌್ಯಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಶಿವಪ್ರಸಾದ್, ಕಾರ್ಯದರ್ಶಿಯಾಗಿ ರಶ್ಮಿತಾ ಜೋಗಿ, ವಿವೇಕ ಬಾಲಕರ ಪ್ರೌಢಶಾಲೆ ಇಂಟರ‌್ಯಾಕ್ಟ್ ಅಧ್ಯಕ್ಷರಾಗಿ ವಸಂತ ಶೆಟ್ಟಿ, ಕಾರ್ಯದರ್ಶಿಯಾಗಿ ವಿಜೇಶ್, ವಿವೇಕ ಬಾಲಕಿಯರ ಪ್ರೌಢಶಾಲೆ ಇಂಟರ‌್ಯಾಕ್ಟ್ ಅಧ್ಯಕ್ಷಯಾಗಿ ಸಾನ್ವಿ, ಕಾರ್ಯದರ್ಶಿಯಾಗಿ ಸಪ್ತಮಿ, ವಿವೇಕ ಆಂಗ್ಲ ಮಾಧ್ಯಮ ಶಾಲೆಯ ಇಂಟರ‌್ಯಾಕ್ಟ್ ಅಧ್ಯಕ್ಷೆಯಾಗಿ ಶ್ರೇಯ, ಕಾರ್ಯದರ್ಶಿಯಾಗಿ ಪ್ರಸಿದ್ಧ ಅಧಿಕಾರ ಸ್ವೀಕರಿಸಿದರು. ಬಾಲಕೃಷ್ಣ ಶೆಟ್ಟಿ ಇಂಟರ‌್ಯಾಕ್ಟ್ ಕ್ಲಬ್ ಪ್ರಾರಂಭ ಮತ್ತು ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು. ವೆಂಕಟೇಶ್ ಉಡುಪ, ನರೇಂದ್ರ ಕುಮಾರ್ ಕೋಟ, ಪ್ರೀತಿರೇಖಾ ಉಪಸ್ಥಿತರಿದ್ದರು. ಪ್ರಭಾರ ಪ್ರಾಂಶುಪಾಲ ಸಂಜೀವ ಗುಂಡ್ಮಿ ನಿರೂಪಿಸಿದರು.