ಬೆಂಗಳೂರು: ಪದವಿ ವ್ಯಾಸಾಂಗದ ಸಮಯ ವಿದ್ಯಾರ್ಥಿ ಜೀವನದ ಮಹತ್ವದ ಟ್ಟ. ಈ ಹಂತದಲ್ಲಿ ನಿರಂತರ ಪರಿಶ್ರಮ ಪಟ್ಟರೆ ಜೀವನದಲ್ಲಿ ಯಶಸ್ಸು ಸಂಪಾದಿಸಬಹುದು. ವಿದ್ಯಾರ್ಜನೆಯ ಸಂದರ್ಭದಲ್ಲಿಯೇ ವೃತ್ತಿಪರತೆ ಮೈಗೂಡಿಸಿಕೊಂಡಾಗ ಸಾಧನೆಯ ಹಾದಿಯಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಐಎನ್ಎಸ್ಎ ಹಿರಿಯ ವಿಜ್ಞಾನಿ ಡಾ.ಜಿ.ಪಾರ್ಥಸಾರಥಿ ಕಿವಿಮಾತು ಹೇಳಿದರು.
ನಗರದ ಎಚ್ಆರ್ಬಿಆರ್ ಲೇಔಟ್ನಲ್ಲಿರುವ ಸಿಎಂಆರ್ ವಿಶ್ವವಿದ್ಯಾಲಯದ ಶೈಕ್ಷಣಿಕ ವರ್ಷದ ಪದವಿ ತರಗತಿಗಳ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಸಿಎಂಆರ್ ಸಮೂಹ ಶಿಣ ಸಂಸ್ಥೆಗಳ ಅಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ ಡಾ. ಕೆ. ಸಿ. ರಾಮಮೂರ್ತಿ ಮಾತನಾಡಿ, ನಿರಂತರ ಕಲಿಕೆ ಮತ್ತು ಪರಿಶ್ರಮದ ಜತೆಗೆ ಶೈಣಿಕ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಿದಾಗ ಮಾತ್ರ ವಿದ್ಯಾರ್ಥಿ ಸಾಧನೆಯ ಗುರಿ ಮುಟ್ಟಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯ ಹಾಗೂ ಸೃಜನಾತ್ಮಕ ಕಲಿಕೆಯಿಂದ ಉದ್ಯೋಗ ೇತ್ರದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಬೇಕಾದ ವಾತಾವರಣವನ್ನು ಸಿಎಂಆರ್ ವಿಶ್ವವಿದ್ಯಾಲಯ ಕಲ್ಪಿಸಿಕೊಟ್ಟಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕಾದುದು ವಿದ್ಯಾರ್ಥಿಗಳ ಕರ್ತವ್ಯ ಎಂದರು.
ಕುಲಸಚಿವ ಡಾ. ಆರ್. ಪ್ರವಿಣ್, ಉಪಕುಲಪತಿ ಡಾ.ಎಚ್.ಬಿ. ರಾವೇಂದ್ರ, ಡೀನ್ ಡಾ. ಸುಜಾ ಬೆನೆಟ್ ಮತ್ತಿರರಿದ್ದರು.