ಬೆಳ್ತಂಗಡಿ: ಬಳಂಜ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಎಸ್‌ಡಿಎಂ ಕಾಲೇಜು ಮತ್ತು ಪಿಜಿ ಸೆಂಟರ್, ಡಿಪಾರ್ಟ್‌ಮೆಂಟ್ ಆಫ್ ಇಂಗ್ಲಿಷ್, ಉಜಿರೆ ಬಳಂಜ ಶಿಕ್ಷಣ ಟ್ರಸ್ಟ್ ನೇತೃತ್ವದಲ್ಲಿ ಬಳಂಜ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲೆಯ 6,7,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನದ ಸ್ಪೋಕನ್ ಇಂಗ್ಲಿಷ್ ತರಗತಿಯನ್ನು ಪಿಜಿ ವಿದ್ಯಾರ್ಥಿಗಳು ನಡೆಸಲಿದ್ದು, ಇದನ್ನು ಉಜಿರೆ ಎಸ್‌ಡಿಎಂ ಕಾಲೇಜಿನ ಹೆಡ್ ಆಫ್ ಡಿಪಾಟ್ಮೆರ್ಂಟ್ ಆಫ್ ಇಂಗ್ಲಿಷ್‌ನ ಡಾ. ಮಂಜುಶ್ರೀ ಆರ್ ಉದ್ಘಾಟಿಸಿದರು.
ಬಳಂಜ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ರತ್ನರಾಜ್ ಜೈನ್, ಟ್ರಸ್ಟಿ ಬಿ ಪ್ರಮೋದ್ ಕುಮಾರ್, ಆಕಾಂಕ್ಷ ಟ್ರಸ್ಟ್ ನ ಸದಸ್ಯೆ ಕವಿತಾ ಎನ್, ಶಾಲೆಯ ಮುಖ್ಯಶಿಕ್ಷಕಿ ಸುಲೋಚನ ಕೆ ಮತ್ತು ರೆನಿಲ್ಡಾ ಜೋಯ್ಸ ಮಥಾಯಸ್ ಉಪಸ್ಥಿತರಿದ್ದರು. ಶಿಕ್ಷಕ ಮಲ್ಲಿಕಾರ್ಜುನ ಆರ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಹೇಮಲತಾ ಸ್ವಾಗತಿಸಿ, ಪಿಜಿ ವಿದ್ಯಾರ್ಥಿನಿ ದೀಪಾ ವಂದಿಸಿದರು.