ಜಿಲ್ಲೆ

ವೇಣೂರಲ್ಲಿ ಇ ಸ್ಟಾಂಪಿಂಗ್ ವ್ಯವಸ್ಥೆ ಉದ್ಘಾಟನೆ

ಸೌಮ್ಯ ಆರ್

ಬಂಟ್ವಾಳ: ಸಜೀಪ ಮುನ್ನೂರು ಮೂರ್ತೇದಾರರ ಸೇವಾ ಸಹಕಾರಿ ಸಂಘ ವೇಣೂರು ಶಾಖೆಯಲ್ಲಿ ಇ ಸ್ಟಾಂಪಿಂಗ್ ವ್ಯವಸ್ಥೆ ಉದ್ಘಾಟನಾ ಸಮಾರಂಭ ಬುಧವಾರ ನಡೆಯಿತು.

ವೇಣೂರು ಬಿಲ್ಲವ ಸಂಘ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ ಈ ಸ್ಟಾಂಪಿಂಗ್ ವ್ಯವಸ್ಥೆ ಉದ್ಘಾಟಿಸಿ ಶುಭ ಹಾರೈಸಿದರು. ವೇಣೂರು ಕರ್ಣಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಬಂಧಕ ರಂಜಿತ್ ದೀಪ ಬೆಳಗಿಸಿದರು. ವೇಣೂರು ಜುಮಾ ಮಸೀದಿ ಅಧ್ಯಕ್ಷ ಜಕ್ರೀಯ ಶುಭ ಹಾರೈಸಿದರು.

ಸಂಘ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಮಾತನಾಡಿ, ಇದರ ಸೇವೆ ಎಲ್ಲ ಗ್ರಾಹಕರು ಪಡೆದುಕೊಂಡು ನಮ್ಮ ಸಂಘದಲ್ಲಿ ಉತ್ತಮ ರೀತಿಯಲ್ಲಿ ವ್ಯವಹರಿಸಿ ಸಂಘದ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕಾಗಿ ವಿನಂತಿಸಿದರು. ವೇಣೂರು ಮೂರ್ತೇದಾರರ ಸಂಘ ಅಧ್ಯಕ್ಷ ರಮೇಶ್ ಪೂಜಾರಿ, ವೆಂಕಟರಮಣ ಕೋ-ಆಪರೇಟಿವ್ ವೇಣೂರು ಶಾಖಾ ವ್ಯವಸ್ಥಾಪಕ ಗಾಯನ್ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಸುಂದರ ಪೂಜಾರಿ, ರಮೇಶ್ ಅನ್ನಪ್ಪಾಡಿ, ಜಯಶಂಕರ ಕಾನ್ಸ್‌ಲೆ, ಆಶಿಶ್ ಪೂಜಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ., ಎಜಿಎಂ ಶಿಲ್ಪಾ ಉಪಸ್ಥಿತರಿದ್ದರು. ನಿರ್ದೇಶಕ ಅರುಣ್ ಕುಮಾರ್ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕಿ ವಿಜಯ ಕೆ.ವಂದಿಸಿದರು.