ಬೆಳ್ತಂಗಡಿ: ಶ್ರೀಕ್ಷೇತ್ರ ಮುಗೇರಡ್ಕ ದೈವಸ್ಥಾನಕ್ಕೆ ಮೊಗ್ರು ಗ್ರಾಮದ ಪರಾರಿ ಮನೆ ಜಯಂತಿ ಮತ್ತು ಸುಂದರಗೌಡ ಮತ್ತು ಮಕ್ಕಳು ಕೊಡುಗೆಯಾಗಿ ನೀಡಿದ ಬಿಸಿನೀರಿನ ಯಂತ್ರವನ್ನು ಮುಗೇರಡ್ಕ ದೈವಸ್ಥಾನದ ಗುತ್ತು ಮನೆಯ ಡಿ.ರಾಮಣ್ಣ ಗೌಡ ಉದ್ಘಾಟಿಸಿದರು.
ಮನೋಹರ್ ಅಂತರ, ಜಯಂತಿ, ಸುಂದರ ಗೌಡ ಪರಾರಿ ಮನೆ, ಸಾಂತಪ್ಪ ಗೌಡ ಮುಗೇರಡ್ಕ, ಚಂದ್ರಶೇಖರ ಮುಗೇರಡ್ಕ, ಸುಧಾಕರ್ ಗೌಡ ನೈಮಾರು, ರಾಮಣ್ಣ ಗೌಡ ಎರ್ಮಲ, ಕೇಶವ ಗೌಡ ಜಾಲ್ನಡೆ, ವೀರಪ್ಪ ಗೌಡ, ಕಿನ್ಯಣ್ಣ ಬರುಂಗುಡೆಲು, ಚಂದಪ್ಪ ದಂಬೆತ್ತಿಮಾರು, ಕೊರಗಪ್ಪ ಗೌಡ ಪುಣ್ಕೆತಡಿ, ಪಂಚಾಯಿತಿ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ ದಂಬೆತ್ತಿಮಾರು ಮೊದಲಾದವರು ಉಪಸ್ಥಿತರಿದ್ದರು.